ಮುಲ್ಕಿ: ಹೊಸ ಅಂಗಣ ತಿಂಗಳ ಬೆಳಕು ಕಾರ್ಯಕ್ರಮ ಮುಲ್ಕಿಯ ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ನಡೆಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ವಹಿಸಿ ಮಾತನಾಡಿ ಸಾಧಕರಿಗೆ ಗೌರವ ಶ್ಲಾಘನೀಯ , ಡಾಕ್ಟರೇಟ್ ಪದವಿ ಪಡೆದ ನನಗೆ ಯಾವುದೇ ಸನ್ಮಾನ ಬೇಡ, ಅಭಿಮಾನ ಇರಲಿ ಎಂದರು.
ವೇದಿಕೆಯಲ್ಲಿ ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಮಯೂರಿ ಅಧ್ಯಕ್ಷ ಜಯ ಶೆಟ್ಟಿ, ಸಮಾಜ ಸೇವಕ ಕೆ.ಎಂ. ಕೋಟ್ಯಾನ್ ಮುಂಬೈ, ನಿವೃತ್ತ ಉಪನ್ಯಾಸಕ ವೈಎನ್ ಸಾಲ್ಯಾನ್, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಮೇಶ್ ಅಮೀನ್, ಸೋಮಸುಂದರ್ ನಡಿಕುದ್ರು, ವಾಮನ ನಡಿಕುದ್ರು, ವಾಸು ಪೂಜಾರಿ ಚಿತ್ರಾಪು, ಜಾನ್ ಕ್ವಾಡ್ರಸ್, ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಶಿವರಾಮ ಜಿ.ಅಮೀನ್, ಹೊಸ ಅಂಗಣ ಮಾಸ ಪತ್ರಿಕೆಯ ಸಂಪಾದಕ ಡಾ. ಹರಿಶ್ಚಂದ್ರ ಪಿ ಸಾಲ್ಯಾನ್, ರವಿಚಂದ್ರ ರಾವ್, ಜಯಪಾಲ ಶೆಟ್ಟಿ ಐಕಳ, ಅಚ್ಯುತ ಮಾಸ್ತರ್ ಕೊಲಕಾಡಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ರವರನ್ನು ಗೌರವಿಸಲಾಯಿತು. ಹಾಗೂ ಕಳೆದ ಹಲವಾರು ವರ್ಷಗಳಿಂದ ನಾಗಸ್ವರ ವಾದಕರಾಗಿ ಸೇವೆ ಸಲ್ಲಿಸುತ್ತಿರುವ ಹಳೆಯಂಗಡಿಯ ಲೈಟ್ ಹೌಸ್ ನ ಲೀಲಪ್ಪ ಶೇರಿಗಾರ ರವರನ್ನು ಸನ್ಮಾನಿಸಲಾಯಿತು.
Kshetra Samachara
28/04/2022 10:31 am