ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು:ಮಕ್ಕಳು ಆಚಾರ ವಿಚಾರವಂತರಾಗಲಿ:ಪಂಜ ಭಾಸ್ಕರ ಭಟ್

ಕಟೀಲು: ಮಕ್ಕಳನ್ನು ಆಚಾರವಂತರೂ ವಿಚಾರವಂತರೂ ಆಗುವಂತೆ ನೋಡಿಕೊಳ್ಳಬೇಕಾಗಿದ್ದು, ದೇವಸ್ಥಾನಗಳು ಈ ನಿಟ್ಟಿನಲ್ಲಿ ಪ್ರಯತ್ನಶೀಲರಾಗುವಾಗ ಹೆತ್ತವರೂ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ಪಂಜ ಭಾಸ್ಕರ ಭಟ್ ಹೇಳಿದರು.

ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮುಂಬೈ ಸಂಜೀವನೀ ಟ್ರಸ್ಟ್ ಸಹಯೋಗದಲ್ಲಿ ನಡೆಯುವ ಹದಿನೈದು ದಿನಗಳ ವಸಂತ ವೇದ ಶಿಬಿರದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.

ಶ್ಲೋಕ, ಮಂತ್ರ, ವೇದ ಉಪನಿಷತ್‌ಗಳ ಬಗ್ಗೆ ಒಂದಿಷ್ಟಾದರೂ ತಿಳಿದುಕೊಂಡಾಗ ನಮ್ಮ ಸಂಸ್ಕೃತಿಯ ಅರಿವಾಗಿ ಮಕ್ಕಳು ಸಂಸ್ಕಾರವಂತರಾಗುತ್ತಾರೆ ಎಂದು ಭಾಸ್ಕರ ಭಟ್ ಹೇಳಿದರು.

ದೇಗುಲದ ಆಡಳಿತ ಸಮಿತಿಯ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್‌ಕುಮಾರ ಶೆಟ್ಟಿ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಸಂಜೀವನಿ ಟ್ರಸ್ಟ್‌ನ ಅಧ್ಯಕ್ಷ ಡಾ. ಕೆ. ಸುರೇಶ್ ರಾವ್ ಮತ್ತಿತರರಿದ್ದರು. ಸಂಸ್ಕೃತ ಉಪನ್ಯಾಸಕ ಡಾ. ಪದ್ಮನಾಭ ಮರಾಠೆ ವಂದಿಸಿದರು. ಶಿಕ್ಷಕ ಶ್ರೀವತ್ಸ ನಿರೂಪಿಸಿದರು.  

Edited By : PublicNext Desk
Kshetra Samachara

Kshetra Samachara

21/04/2022 04:34 pm

Cinque Terre

1.56 K

Cinque Terre

0

ಸಂಬಂಧಿತ ಸುದ್ದಿ