ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಕ್ಕ: ಪ್ರವಾಸೋದ್ಯಮ ಅಭಿವೃದ್ಧಿಗೆ ರಸ್ತೆ ಕಾಮಗಾರಿ ಪೂರಕ

ಸುರತ್ಕಲ್: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ವಾರ್ಡ್ 1 ಮುಕ್ಕದಿಂದ ಮಿತ್ರಪಟ್ಣ ಭಜನಾ ಮಂದಿರದ ಮಾರ್ಗವಾಗಿ ಸಸಿಹಿತ್ಲು ಹೋಗುವ ರಸ್ತೆಯನ್ನು ಅಭಿವೃದ್ಧಿಗೊಳಿಸಿ ಕಾಂಕ್ರೀಟಿಕರಣ ಮಾಡುವ ಕಾಮಗಾರಿಗೆ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಬುಧವಾರ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭ ಶಾಸಕರು ಮಾತನಾಡಿ, ಭವಿಷ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದಲೂ ಈ ಯೋಜನೆ ಮಹತ್ವವಾಗಿದೆ ಎಂದರು.

ಈ ಸಂದರ್ಭ ಉಪಮೇಯರ್ ಸುಮಂಗಲಾ, ಸ್ಥಳೀಯ ಕಾರ್ಪೊರೇಟರ್ ಶೋಭಾ ರಾಜೇಶ್, ನಯನ ಕೋಟ್ಯಾನ್, ಸರಿತಾ ಶಶಿಧರ್ , ಮೊಗವೀರ ಮಿತ್ರಪಟ್ಣ ಅಧ್ಯಕ್ಷರಾದ ರವೀಂದ್ರ ಕರ್ಕೇರ, ಪ್ರಮುಖರಾದ ಭೋಜ ಪೂಜಾರಿ, ಮಂಡಲ ಕೋಶಾಧಿಕಾರಿ ಪುಷ್ಪರಾಜ್ ಮುಕ್ಕ,ಮಂಡಲ ಕಾರ್ಯದರ್ಶಿ ರಾಘವೇಂದ್ರ ಶೆಣೈ ಮಂಡಲ ಉಪಾಧ್ಯಕ್ಷರಾದ ಮಹೇಶ್ ಮೂರ್ತಿ, ಶಕ್ತಿ ಕೇಂದ್ರ ಪ್ರಮುಖ್ ರಾಜೇಶ್ ಮುಕ್ಕ , ರಂಜಿತ್,ನವೀನ್ , ಶಶಿಧರ್, ಸುರೇಶ್ ಕರ್ಕೇರ,ಆಶಾ ಕುಂದರ್, ದಿವಾಕರ್ ಪುತ್ರನ್, ರಾಹುಲ್ ಮುಕ್ಕ,ವಚನ್ ಮಾಣೈ, ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

20/04/2022 02:28 pm

Cinque Terre

1.7 K

Cinque Terre

0

ಸಂಬಂಧಿತ ಸುದ್ದಿ