ಕಟೀಲು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಎ.18 ಸೋಮವಾರ ರಾತ್ರಿ ಶ್ರೀದೇವರ ಉತ್ಸವ ಬಲಿ ಹಾಗೂ ಚಿನ್ನದ ಪಲ್ಲಕ್ಕಿ ಉತ್ಸವ ವಿಜ್ರಂಭಣೆಯಿಂದ ನಡೆಯಿತು.
ಶ್ರೀ ದೇವರು ಚಿನ್ನದ ಪಲ್ಲಕ್ಕಿಯಲ್ಲಿ ವಿರಾಜಮಾನರಾಗಿ ಪಲ್ಲಕ್ಕಿ ಸುತ್ತು ವಿವಿಧ ವಾದ್ಯಗಳ ಹಾಗೂ ಚೆಂಡೆ ಸುತ್ತು ನಡೆಯಿತು.
ಈ ಸಂದರ್ಭ ದೇವಸ್ಥಾನದ ಅನುವಂಶಿಕ ಮೊಕ್ತೇಸರರು, ಅರ್ಚಕ ವೃಂದ ಭಕ್ತಾದಿಗಳು ಉಪಸ್ಥಿತರಿದ್ದರು.
Kshetra Samachara
19/04/2022 08:30 am