ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್:ಸಂಘಟನೆಗಳಲ್ಲಿ ಒಗ್ಗಟ್ಟು ಮೂಲಮಂತ್ರವಾಗಲಿ

ಸುರತ್ಕಲ್: ಸಂಘಟನೆಗಳು ಒಗ್ಗಟ್ಟಿನ ಮೂಲ ಮಂತ್ರ ಮೂಲಕ ಅಭಿವೃದ್ಧಿಯತ್ತ ದಾಪುಗಾಲು ಹಾಕಬೇಕು ಎಂದು ಮಂಗಳೂರು ಶಿವಳ್ಳಿ ಸ್ಪಂದನದ ಅಧ್ಯಕ್ಷ ಕದ್ರಿ ಕೃಷ್ಣ ಭಟ್ ಹೇಳಿದರು.

ದ.ಕ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ 13 ವಲಯಗಳ ಸದಸ್ಯರಿಗೆ ಆಯೋಜಿಸಲಾದ ಕ್ರೀಡಾ ಕೂಟದ ಸಮಾರೋಪ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದರು.

ಸುರತ್ಕಲ್ ಚಿತ್ರಾಪುರ ಮಠದ ಯತಿಶ್ರೇಷ್ಠರಾದ ಶ್ರೀ ವಿದ್ಯೇಂದ್ರ ತೀರ್ಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಈ ಸಂದರ್ಭ ಪಾವಂಜೆ ವಲಯದ ಸದಸ್ಯರು ಕ್ರಿಕೆಟ್ ಪ್ರಥಮ,ಹಗ್ಗ ಜಗ್ಗಾಟ ಮಹಿಳೆಯರು ಪ್ರಥಮ, ಹಗ್ಗ ಜಗ್ಗಾಟ ಪುರುಷರು ದ್ವಿತೀಯ,ವಾಲಿಬಾಲ್ ದ್ವಿತೀಯ ಪ್ರಶಸ್ತಿ ಪಡೆದರು.

ಈ ಸಂದರ್ಭ ಶಿವಳ್ಳಿಸ್ಪಂದನ ಮಂಗಳೂರು ವಲಯದ ಕಾರ್ಯದರ್ಶಿ ಗಣೇಶ್ ಹೆಬ್ಬಾರ ಮತ್ತು ಸುಬ್ರಮಣ್ಯ ಭಟ್,ಪಾವಂಜೆ ವಲಯದ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು, ಕಾರ್ಯದರ್ಶಿಗಣೇಶ್ ತಂತ್ರಿ, ಎಸ್ಕೆಪಿಎ ನಿರ್ದೇಶಕ ಮೋಹನ್ ರಾವ್ ಪಾವಂಜೆ ಹಾಗೂ ವಿವಿಧ ಪದಾಧಿಕಾರಿಗಳು ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

18/04/2022 04:14 pm

Cinque Terre

1.19 K

Cinque Terre

0

ಸಂಬಂಧಿತ ಸುದ್ದಿ