ಮುಲ್ಕಿ: ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಚೈತ್ರ ಶುದ್ದ ಹುಣ್ಣಿಮೆ ಶನಿವಾರ ಶ್ರೀ ದೇವರಿಗೆ ಶತಕಲಶ ಸಂಪ್ರೋಕ್ಷಣೆ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ.9 ಗಂಟೆಗೆ ಪ್ರಾರ್ಥನೆಯೊಂದಿಗೆ ಪಂಚಾಮೃತ ಸಹಿತ ಸೀಯಾಳಾಭಿಷೇಕ ಪ್ರಾರಂಭ ಶತಕಲಶ ಅಭಿಷೇಕ, ಕನಕಾಭಿಷೇಕ, ಗಂಗಾ ಭಾಗೀರಥಿ ಅಭಿಷೇಕ, ಮಧ್ಯಾಹ್ನ ಶ್ರೀ ದೇವರಿಗೆ ಸಿಂಹಾಸನದಲ್ಲಿ ಮಂಗಳಾರತಿ, ಅಷ್ಟಮಂಗಲ ನಿರೀಕ್ಷಣೆ, ಪಟ್ಟಕಾಣಿಕೆ. ಸಂಜೆ5.30ಕ್ಕೆ ಮಹಾನೈವೇದ್ಯ, ಮಂಗಳಾರತಿ, ಭೂರಿಸಮಾರಾಧನೆ ನಡೆಯಿತು.
ರಾತ್ರಿ.8 ಕ್ಕೆ ರಾತ್ರಿಪೂಜೆ,ದೀಪಾರಾಧನೆ, ರಥೋತ್ಸವ,ದರ್ಶನಸೇವೆ ಸಹಿತ ನಿತ್ಯೋತ್ಸವ,ಭಂಡಿ, ಚಂದ್ರಮಂಡಲ ಉತ್ಸವ, ವಸಂತಪೂಜೆ ನಡೆಯಿತು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿ, ಭಜಕವೃಂದ ಉಪಸ್ಥಿತರಿದ್ದರು.
Kshetra Samachara
16/04/2022 06:45 pm