ಮುಲ್ಕಿ:ಸಂವಿಧಾನದ ಕೃರ್ತ ಸಮಾನತೆಯ ಹರಿಕಾರ , ಸಮುದಾಯದ ಪ್ರಗತಿಯ ಚಿಂತಕ ಅವರ ದೂರದೃಷ್ಟಿಯಲ್ಲಿ ಭವ್ಯಭಾರತ ಇಂದು ನಿರ್ಮಾಣವಾಗಿದೆ ಎಂದು ಮೂಲ್ಕಿ - ಮೂಡಬಿದಿರೆ ಬಿಜೆಪಿ ಮಂಡಲದ ಅಧ್ಯಕ್ಷ ಸುನಿಲ್ ಆಳ್ವ ಹೇಳಿದರು. ಅವರು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಬಿಜೆಪಿ ಎಸ್. ಸಿ ಮೋರ್ಚಾದ ಮೂಲ್ಕಿ - ಮೂಡಬಿದಿರೆ ಇವರ ಆಶ್ರಯದಲ್ಲಿ ನಡದ ಅಂಬೇಡ್ಕರ ಅವರ 131ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಎಸ್.ಸಿ ಮೋರ್ಚಾದ ಪ್ರಭಾರಿ ಶಾಂಭವಿ ಶೆಟ್ಟಿ , ಎಸ್. ಸಿ ಮೋರ್ಚಾದ ಅಧ್ಯಕ್ಷ ಆನಂದ ಕೆ , ಎಸ್. ಸಿ. ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ವಿಠಲ್ ಎನ್. ಎಮ್, ಮಂಡಲದ ಕಾರ್ಯದರ್ಶಿ ಕೇಶವ ಕರ್ಕೇರಾ, ಮಾಜಿ ತಾ. ಪಂ ಸದಸ್ಯ ದಿವಾಕರ ಕರ್ಕೇರಾ, ಪ್ರಧಾನ ಕಾರ್ಯದರ್ಶಿ ವಿನಯ್ ಸಾಲ್ಯಾನ್, ಕೋಶಾಧಿಕಾರಿ ಪ್ರಮೀಳಾ, ಪ್ರಧಾನ ಕಾರ್ಯದರ್ಶಿ ಕಪಿಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಮೋರ್ಚಾದ ಸದಸ್ಯರು ಉಪಸ್ಥಿತರಿದ್ದು ಅಂಬೇಡ್ಕರವರ ಬಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಲಾಯಿತು.
Kshetra Samachara
14/04/2022 09:58 pm