ಮುಲ್ಕಿ: ಕಿಲ್ಪಾಡಿ ಬಬ್ಬುಸ್ವಾಮಿ ಯುವಕ ಮಂಡಲದ ವತಿಯಿಂದ ಕಿಲ್ಪಾಡಿ ಶ್ರೀ ಕೋರ್ದಬ್ಬು ದೈವಸ್ಥಾನಕ್ಕೆ ಧ್ವನಿವರ್ಧಕದ ಸೇವೆ ಒದಗಿಸಲಾಯಿತು.
ಈ ಸಂದರ್ಭ ಊರಿನ ಹಿರಿಯರಾದ ನಾರಾಯಣ ಭಟ್ ಮಾತನಾಡಿ ದೈವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಹಾಯ ನೀಡುತ್ತಿರುವ ಊರಿನ ಸಂಘಟನೆಗಳು ಹಾಗೂ ದಾನಿಗಳ ಕಾರ್ಯ ಅಭಿನಂದನೀಯ ಎಂದರು.
ಈ ಸಂದರ್ಭ ಕಿಲ್ಪಾಡಿ ಶ್ರೀ ಕುಮಾರಮಂಗಿಲ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಶೇಖರ ಮಯ್ಯ, ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಿನಾಥ ಪಡಂಗ, ಬಬ್ಬು ಸ್ವಾಮಿ ಯುವಕ ಮಂಡಲದ ಅಧ್ಯಕ್ಷ ರಂಜನ್ ಶೆಟ್ಟಿ,ವಸಂತ ಗುರಿಕಾರ, ಅರ್ಚಕ ರಮೇಶ, ಕಿಶೋರ, ಸ್ಥಳೀಯರಾದ ಶಂಕರ ಪಡಂಗ, ಮಾಧವ ಆಚಾರ್ಯ, ಪ್ರಕಾಶ್ ದೇವಾಡಿಗ, ಉಪೇಂದ್ರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.ಗೋಪಿನಾಥ ಪಡಂಗ ನಿರೂಪಿಸಿದರು.
Kshetra Samachara
14/04/2022 12:34 pm