ಮುಲ್ಕಿ: ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ (ರಿ.), ಮೂಡಬಿದ್ರೆ ವಿಶ್ವ ಹಿಂದು ಪರಿಷತ್ ಬಜರಂಗದಳ ಪ್ರಖಂಡ ಸಂಯುಕ್ತ ಆಶ್ರಯದಲ್ಲಿ ಶ್ರೀ ರಾಮ ನವಮಿ ಪ್ರಯುಕ್ತ ಮೂಡುಬಿದಿರೆ ಬಸ್ ನಿಲ್ದಾಣದ ಬಳಿ ಪಾನಕ ಸೇವೆ ನಡೆಯಿತು.
ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ (ರಿ.) ಅಧ್ಯಕ್ಷ ನಿಡ್ಡೋಡಿ ಚಾವಡಿಮನೆ ಡಾ.ಜಗನ್ನಾಥ ಶೆಟ್ಟಿ ಮೂಡಬಿದ್ರೆ ತಾಲೂಕು ವಿಶ್ವ ಹಿಂದೂ ಪರಿಷತ್ ಕಾರ್ಯಧ್ಯಕ್ಷ ಶ್ಯಾಮ ಹೆಗ್ಡೆ , ಉಪಾಧ್ಯಕ್ಷ ಎಂ ಶಾಂತರಾಮ ಕುಡ್ವ, ಕಾರ್ಯದರ್ಶಿ ಸುಚೇತನ್ ಜೈನ್ , ಸಹಕಾರ್ಯದರ್ಶಿ ರಕ್ಷಿತ್ , ಗೋ ರಕ್ಷಾ ಪ್ರಮುಖ್ ಅವಿನಾಶ್, ವಿಜೇಶ್, ಉದ್ಯಮಿ ಹರೀಶ್ ದೇವಾಡಿಗ ಹಾಗೂ ಘಟಕಗಳ ಸಮಸ್ತ ಕಾರ್ಯಕರ್ತರು ಉಪಸ್ಥಿತರಿದ್ದರು.
ಭಕ್ತಾದಿಗಳು ರಾಮ ದೇವರಿಗೆ ಪುಷ್ಪಾರ್ಚನೆ ಮೂಲಕ ಪಾನಕ ಸೇವಿಸಿದರು.
Kshetra Samachara
11/04/2022 09:37 am