ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು:ಪಠ್ಯಪುಸ್ತಕಗಳಲ್ಲಿ ಜೀವನ ಮೌಲ್ಯ ಕಲಿಸುವ ಪಾಠಗಳ ಅಗತ್ಯವಿದೆ

ಕಟೀಲು : ಪಠ್ಯಪುಸ್ತಕಗಳಲ್ಲಿ ಈಗಿರುವ ಅನೇಕ ಪಾಠಗಳು ಅಧ್ವಾನಗಳಿಂದ ಕೂಡಿವೆ. ಉಪನಿಷತ್, ಪಂಚತಂತ್ರ, ರಾಮಾಯಣ, ಮಹಾಭಾರತದಂತಹ ಜೀವನ ಮೌಲ್ಯ ಕಲಿಸುವ ವಿಚಾರಗಳನ್ನು ಕಲಿಸುವ ಅಗತ್ಯ ಇದೆಯೇ ಹೊರತು ಸಿದ್ಧಾಂತಗಳನ್ನು ಕಲಿಸುವ ಅಗತ್ಯ ಇಲ್ಲ ಎಂದು ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೇಳಿದರು.

ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆದ ರಾಮನವಮಿ ಕಾರ‍್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ವಿದೇಶೀ ಪ್ರವಾಸಿಗರು ಇಡೀ ಭಾರತವನ್ನು ಅರ್ಥ ಮಾಡಿಕೊಳ್ಳಬೇಕಾದರೆ ರಾಮಾಯಣ ಮಹಾಭಾರತವನ್ನು ಓದಿದರೆ ಸಾಕು ಎಂದು ರಾಮ ಮನೋಹರ ಲೋಹಿಯಾರಂತಹವರೇ ಹೇಳಿದ್ದಾರೆ. ಕಾಶ್ಮೀರವಷ್ಟೇ ಅಲ್ಲ ಅದರಾಚೆಗೂ, ಈ ಕಡೆ ಶ್ರೀಲಂಕಾದವರೆಗೂ ತಿಳಿಯಲು ಸಾಧ್ಯವಿದೆ. ವ್ಯಕ್ತಿಗಳ ಆದರ್ಶವನ್ನು ತಿಳಿಸುತ್ತ ರಾಮಾಯಣ ಕಾವ್ಯ ಇವತ್ತಿಗೂ ಸಮಕಾಲೀನವಾಗಿ ನಿಂತಿದೆ. ರಾಮಾಯಣ ನಮ್ಮೆಲ್ಲರ ಕುಟುಂಬದ ಕಥೆಯೂ ಹೌದು. ರಾಮಾಯಣದಂತಹ ಧಾರ್ಮಿಕ ಕೃತಿಯನ್ನು ಅನೇಕರು ಬರೆದಿದ್ದಾರೆ. ಇದು ಹಿಂದೂ ಧರ್ಮದಲ್ಲಿ ಮಾತ್ರ ಸಾಧ್ಯ, ಇಲ್ಲಿ ಯಾವುದೇ ಹೇರಿಕೆಯಿಲ್ಲ. ಇಂತಹ ರಾಮಾಯಣ ಮಹಾಭಾರತವನ್ನು ಓದುವ, ಓದಿಸುವ ಕೆಲಸ ನಡೆಯಲಿ ಎಂದು ರೋಹಿತ್ ಚಕ್ರತೀರ್ಥ ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಮಾತನಾಡಿದರು. ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ ದೀಪಬೆಳಗಿಸಿ ಉದ್ಘಾಟಿಸಿದರು. ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಅತ್ತೂರು ವೆಂಕಟರಾಜ ಉಡುಪ, ಚರಣ್ ಜೆ. ಶೆಟ್ಟಿ, ಕೊಡೆತ್ತೂರು ವೇದವ್ಯಾಸ ಉಡುಪ, ದೇವೀಪ್ರಸಾದ ಶೆಟ್ಟಿ, ಎಕ್ಕಾರು ಹರಿದಾಸ ಉಡುಪ, ನಿತಿನ್ ಹೆಗ್ಡೆ, ಶಿಬರೂರು ಉಮೇಶ್ ಎನ್. ಶೆಟ್ಟಿ, ಕೈಯೂರು ಲಕ್ಷ್ಮೀನಾರಾಯಣ ರಾವ್ ಮತ್ತಿತರರಿದ್ದರು. ಉಪನ್ಯಾಸಕ ಸಂತೋಷ್ ಆಳ್ವ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

11/04/2022 07:23 am

Cinque Terre

2.55 K

Cinque Terre

0

ಸಂಬಂಧಿತ ಸುದ್ದಿ