ಸುರತ್ಕಲ್:ಸರಕಾರದ ಸೌಲಭ್ಯಗಳಾದ ವಿಧವಾ ವೇತನ, ಸಂಧ್ಯಾ ಸುರಕ್ಷಾ, ವಿಕಲಚೇತನ ವೇತನ, ವೃದ್ಯಾಪ್ಯ ಪಿಂಚಣಿ ಸಹಿತ ವಿವಿಧ ಯೋಜನೆಗಳ ಪ್ರಮಾಣಪತ್ರಗಳನ್ನು ಸುರತ್ಕಲ್ ಭಾಗದ 57 ಫಲಾನುಭವಿಗಳಿಗೆ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿಯವರು ಪಾಲಿಕೆಯ ಉಪಕಚೇರಿಯಲ್ಲಿ ವಿತರಿಸಿದರು.
ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಲೋಕೇಶ್ ಬೊಳ್ಳಾಜೆ, ಶೋಭಾ ರಾಜೇಶ್, ಮ.ನ.ಪಾ ಸದಸ್ಯರುಗಳು ಉಪಹಶಿಲ್ದಾರ್ ನವೀನ್,ಕಂದಾಯ ಅಧಿಕಾರಿ ರವಿಪ್ರಸಾದ್ ಮಲ್ಯ , ಸ್ಥಳೀಯ ಭಾಗದ ಪಕ್ಷದ ಪ್ರಮುಖರು, ಫಲಾನುಭವಿಗಳು, ಕಾರ್ಯಕರ್ತರುಗಳು ಜೊತೆಗಿದ್ದರು
Kshetra Samachara
07/04/2022 05:04 pm