ಮುಲ್ಕಿ: ಮುಲ್ಕಿಯ ಇತಿಹಾಸ ಪ್ರಸಿದ್ಧ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀರಾಮನವಮಿ ಪರ್ಯಂತ ಶ್ರೀಸಂಸ್ಥಾನ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರತೀರ್ಥ ಸ್ವಾಮೀಜಿ ಯವರ ಶುಭಾಶೀರ್ವಾದ ಗಳೊಂದಿಗೆ ಕಾಲಂಪ್ರತಿ ನಡೆದು ಬರುವ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ ವಿಜ್ರಂಭಣೆಯಿಂದ ನಡೆಯಿತು.
ಎ.6.ಬುಧವಾರ ಸಂಜೆ ವಿಶೇಷ ಪ್ರಾರ್ಥನೆ , ದ್ವಜಾರೋಹಣ ನಡೆಯಿತು.
ಎ.9 ರಾತ್ರಿ ಮೃಗಬೇಟೆ ಉತ್ಸವ, ಎ.10 ಬೆಳಗ್ಗೆ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ಮಹಾ ನೈವೇದ್ಯ, ಮಂಗಳಾರತಿ, ಶ್ರೀ ದೇವರು ಯಜ್ಞಕ್ಕೆ ಹೊರಡುವ ಕಾರ್ಯಕ್ರಮ, ಸಾಯಂಕಾಲ ಯಜ್ಞ ಪೂರ್ಣಾಹುತಿ, ಬ್ರಹ್ಮ ರಥಾರೋಹಣ, ಭೂರಿ ಸಮಾರಾಧನೆ, ಚಂದ್ರಮಂಡಲ ರಥೋತ್ಸವ, ವಸಂತ ಪೂಜೆ ಇತ್ಯಾದಿಗಳು ನಡೆಯಲಿದೆ.
ಎ. 11 ಸೋಮವಾರ ಬೆಳಗ್ಗೆ10 ಗಂಟೆಗೆ ಕವಾಟೋದ್ಘಾಟನೆ, ಸಾಯಂಕಾಲ ಅವಭೃತ ಓಕುಳಿ ಉತ್ಸವ ನಡೆಯಲಿದೆ
ಎ.16 ಶತಕಲಶ ಸಂಪ್ರೋಕ್ಷಣೆ ನಡೆಯಲಿದೆ.
Kshetra Samachara
07/04/2022 07:21 am