ಮುಲ್ಕಿ:ಪಂಜದಗುತ್ತು ಶಾಂತರಾಮ ಶೆಟ್ಟಿಯವರು ಸಮಾಜದಲ್ಲಿ ವ್ಯಕ್ತಿಯಲ್ಲ ಶಕ್ತಿಯಾಗಿದ್ದರು ಎಂದು ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ ಹೇಳಿದರು.
ಹಳೆಯಂಗಡಿಯ ಪ್ರಿಯದರ್ಶಿನಿ ಸಹಕಾರ ಸಂಘದಲ್ಲಿ ಏರ್ಪಡಿಸಿದ ದಿ| ಪಂಜದಗುತ್ತು ಶಾಂತರಾಮ ಶೆಟ್ಟಿಯವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಘದ ಅಧ್ಯಕ್ಷರಾದ ಎಚ್. ವಸಂತ್ ಬೆರ್ನಾರ್ಡ್ ಮಾತನಾಡಿದರು.
ಮುಖ್ಯ ಆತಿಥಿಗಳಾಗಿ ಪುಣೆ ಉದ್ಯಮಿ ಸದಾನಂದ ಶೆಟ್ಟಿ, ಶರತ್ ಶೆಟ್ಟಿ, ಶ ಸರಿತಾ ಶೆಟ್ಟಿ, ನಿರ್ದೇಶಕರಾದ ಉಮಾನಾಥ ಶೆಟ್ಟಿಗಾರ್ , ಗೌತಮ್ ಜೈನ್, ಗಣೇಶ್ ಪ್ರಸಾದ್ ದೇವಾಡಿಗ, ಹರೀಶ್ ಪುತ್ರನ್ ಸಸಿಹಿತ್ಲು, ಮಿರ್ಜಾ ಅಹಮ್ಮದ್, ಜೈಕೃಷ್ಣ, ನವೀನ್ ಸಾಲ್ಯಾನ್ ಪಂಜ, ಹಾಗೂ ಪಂಚಾಯತ್ ಸದಸ್ಯರುಗಳಾದ ಅಬ್ದುಲ್ ಅಝೀಝ್, ಅಬ್ದುಲ್ ಖಾದರ್, ಪದ್ಮಾವತಿ ಶೆಟ್ಟಿ, ನೀತು ನಿರಂಜಲ, ಮಾಜಿ ಸದಸ್ಯರುಗಳಾದ ಹಮೀದ್ ಸಾಗ್, ಬಶೀರ್ ಸಾಗ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಉಪಸ್ಥಿತರಿದ್ದರು.
Kshetra Samachara
06/04/2022 01:08 pm