ಮುಲ್ಕಿ: ಕಿನ್ನಿಗೋಳಿ ಸಮೀಪದ ಕೊಡೆತ್ತೂರು ದೇವಸ್ಯ ಮಠದಲ್ಲಿ ಶ್ರೀ ಶ್ರೀನಿವಾಸ ದೇವರಿಗೆ ಬೆಳ್ಳಿ ಪೀಠ ಸಮರ್ಪಣೆ ಹಾಗೂ ಶ್ರೀ ವಿಷ್ಣುಮೂರ್ತಿ ದೇವರ ಪುನರ್ ಪ್ರತಿಷ್ಠಾ ಕಾರ್ಯಕ್ರಮವು ನಡೆಯಿತು.
ಶಿಬರೂರು ವೇದವ್ಯಾಸ ತಂತ್ರಿ ಸುರಗಿರಿ ವಿಶ್ವೇಶ ಭಟ್ ಮುಂತಾದ ಋತ್ವಿಜರ ಉಪಸ್ಥಿತಿಯಲ್ಲಿ ವಾಸ್ತು ಪೂಜೆ, ವಾಸ್ತು ಹೋಮ, ಸುದರ್ಶನ ಹೋಮ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆದು ಬುಧವಾರ ಬೆಳಗ್ಗೆ ಗಂಟೆ 9.30ರ ವೃಷಭ ಲಗ್ನ ಸುಮುಹೂರ್ತದಲ್ಲಿ ವಿಷ್ಣುಮೂರ್ತಿ ದೇವರ ಪುನರ್ ಪ್ರತಿಷ್ಟೆ ಅಷ್ಟಬಂಧ. ಕಲಶಾಭಿಷೇಕ ನಡೆಯಿತು.
ದೇವಸ್ಯ ಮಠದ ವೇದವ್ಯಾಸ ಉಡುಪ, ರಾಮದಾಸ ಉಡುಪ. ಅಜಾರು ನಾಗರಾಜ ರಾಯ ಮುಂತಾದವರಿದ್ದರು.
Kshetra Samachara
06/04/2022 12:14 pm