ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಿಂಗಪ್ಪಯ್ಯಕಾಡು: ಭಜನಾ ಸಂಕೀರ್ತನೆ ಯಾತ್ರೆ ಮೂಲಕ ಧರ್ಮಜಾಗೃತಿಗೆ ಪ್ರಯತ್ನ: ವಿಠ್ಠಲ್ ಎನ್.ಎಂ

ಮುಲ್ಕಿ: ಲಿಂಗಪ್ಪಯ್ಯಕಾಡು ವೀರಕೇಸರಿ ತರುಣ ವೃಂದ ಆಶ್ರಯದಲ್ಲಿ ನಡೆದ 19ನೇ ವರ್ಷದ ಯುಗಾದಿ ಉತ್ಸವದ ಅಂಗವಾಗಿ ಭಜನಾ ಸಂಕೀರ್ತನಾ ಯಾತ್ರೆ ನಡೆಯಿತು.

ಶಿಮಂತೂರು ಶ್ರೀ ಆದಿ ಜನಾರ್ದನ ಭಜನಾ ಮಂಡಳಿ ವತಿಯಿಂದ ಕೆಎಸ್ ರಾವ್ ನಗರದಲ್ಲಿ ಭಜನಾ ಸಂಕೀರ್ತನೆ ಯಾತ್ರೆ ಶಿಸ್ತುಬದ್ಧವಾಗಿ ನಡೆಯಿತು. ಈ ಸಂದರ್ಭ ಸಾಮಾಜಿಕ ಕಾರ್ಯಕರ್ತ ವಿಠಲ್ ಎನ್.ಎಂ., ಮಾತನಾಡಿ ಭಜನಾ ಸಂಕೀರ್ತನೆ ಯಾತ್ರೆ ಮೂಲಕ ಯುವಕರಲ್ಲಿ ಧರ್ಮಜಾಗೃತಿ ಶಿಸ್ತುಬದ್ಧವಾಗಿ ಮೂಡಿಸುವ ಸಣ್ಣಮಟ್ಟಿನ ಪ್ರಯತ್ನ ನಡೆಸಲಾಗಿದೆ ಎಂದರು.

ವೀರಕೇಸರಿ ತರುಣ ವೃಂದದ ಅಧ್ಯಕ್ಷ ಪ್ರಶಾಂತ್ ಕೆ, ಉಪಾಧ್ಯಕ್ಷ ಅರ್ಜುನ್ ತಳವಾರ್, ಕಾರ್ಯದರ್ಶಿ ಉಮೇಶ್ ಮುಲ್ಕಿ, ಲಿಂಗ ಪೂಜಾರಿ, ಸಂಚಾಲಕರು ಗಳಾದ ಮಲ್ಲಣ್ಣ ಗೌಡ್ರು ಮಣಿಕಂಠ, ಖಜಾಂಚಿ ಮುತ್ತುರಾಜ ಉಪ್ಪಾರ ಮತ್ತು ಶ್ರವಣ್ ಕುಮಾರ್ ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

04/04/2022 04:37 pm

Cinque Terre

1.89 K

Cinque Terre

0

ಸಂಬಂಧಿತ ಸುದ್ದಿ