ಮುಲ್ಕಿ: ಉಡುಪಿ ಜಿಲ್ಲೆಯ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಸಸಿಹಿತ್ಲು ಕದಿಕೆ ಮೊಗವೀರ ಮಹಾಸಭಾ ಮತ್ತು ಮಹಿಳಾ ಸಭಾ ವತಿಯಿಂದ ಬೃಹತ್ ಮೆರವಣಿಗೆಯಲ್ಲಿ ಹೊರೆಕಾಣಿಕೆ ಸಮರ್ಪಿಸಲಾಯಿತು.
ಮಂಗಳೂರಿಂದ ವಿವಿಧ ಸಂಘಸಂಸ್ಥೆಗಳ ನೇತೃತ್ವದಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೊರಟ ಬೃಹತ್ ಹೊರೆಕಾಣಿಕೆಗೆ ಹಳೆಯಂಗಡಿ ಜಂಕ್ಷನ್ ಬಳಿ ಭವ್ಯವಾದ ಸ್ವಾಗತ ಕೋರಲಾಯಿತು
ಮೊಗವೀರ ಮಹಾಸಭಾದ ಅಧ್ಯಕ್ಷ ರೋಹಿತಾಕ್ಷ ಅಮೀನ್ ಉಪಾಧ್ಯಕ್ಷ ಗಿರೀಶ್ ಶ್ರೀಯಾನ್, ಮುಂಬೈ ಸಮಿತಿ ಅಧ್ಯಕ್ಷ ಚಂದ್ರಕಾಂತ ಪುತ್ರನ್, ಮೊಗವೀರ ಮುಖಂಡ ಉದ್ಯಮಿ ವೇದ್ ಪ್ರಕಾಶ್ ಶ್ರೀಯಾನ್ ಮುಂಬೈ. ಮಹಿಳಾ ಸಭಾ ಅಧ್ಯಕ್ಷೆ ತಿಲಕಾಕ್ಷಿ ಮತ್ತಿತರ ಸಮಾಜ ಬಾಂಧವರು ಉಪಸ್ಥಿತರಿದ್ದರು.
Kshetra Samachara
01/04/2022 03:59 pm