ಮುಲ್ಕಿ:ತುಳುನಾಡಿನಲ್ಲಿ ಹಲವು ದೈವಗಳು ನೆಲೆನಿಂತಿದ್ದು, ಗ್ರಾಮ ದೈವ ಮನೆ ದೈವಗಳಾಗಿ ಭಕ್ತರಿಂದ ಕಾಲಕಾಲಕ್ಕೆ ಸೇವೆಗಳನ್ನು ಪಡೆಯುತ್ತಿದೆ.ಆದರೆ ಅರಸು ಕುಂಜಿರಾಯ ದೈವ ಮಾತ್ರ ಕೇವಲ ಮೂರು ಕಡೆಗಳಲ್ಲಿ ಮಾತ್ರ ಕಾಣ ಸಿಗುತ್ತಿದೆ.
ಅದರಲ್ಲಿ ಅತ್ತೂರು, ಕೊಡೆತ್ತೂರು ಮತ್ತು ಕಾಸರಗೋಡಿನ ಮಮಜಿಷ್ಣರ್ ಗಳಲ್ಲಿ ಸಿಗುತ್ತದೆ. ಕುಂಜಿರಾಯ ದೈವದ ನೇಮೋತ್ಸವ ಕೂಡ ಬೇರೆ ದೈವಗಳಿಗಿಂತ ಭಿನ್ನವಾಗಿದೆ, ದೈವಸ್ಥಾನದ ಅಂಗಣದಲ್ಲಿ ತೆಂಗಿನ ಗರಿಯ ಕೋಣೆಯನ್ನು ನಿರ್ಮಿಸಲಾಗುತ್ತದೆ.
ಇದನ್ನು ಒಲಿಮದೆ ಎಂದು ಕರೆಯಲಾಗುತದೆ. ಇದರ ಒಳ ಭಾಗದಲ್ಲಿ ದೈವ ಕಲಾವಿದ ಬಣ್ಣವನ್ಬು ಹಚ್ಚಿ ನೇಮೋತ್ಸವಕ್ಕೆ ಸಿದ್ದನಾಗುತ್ತಾನೆ, ನಂತರ ದೈವಸ್ಥಾನದ ಮುಕಾಲ್ದಿಯವರು ಒಲಿಮದೆಗೆ ಪೂಜೆ ಸಲ್ಲಿಸುತ್ತಾರೆ, ಬ್ಯಾಂಡ್ ವಾದ್ಯದ ನಿನಾದದೊಂದಿಗೆ, ದೈವ ಕಲಾವಿದ ಅವೇಷಭರಿತನಾಗಿ ಒಲಿಮದೆಯನ್ನು ಒಡೆದು ಹೊರಬಂದು ನೇಮೋತ್ಸವ ನಡೆಯುತ್ತದೆ, ಇಂತಹ ಸಂಪ್ರದಾಯ ಕಾಣ ಸಿಗುವಿದು ಅರಸು ಕುಂಜಿರಾಯ ನೇಮೋತ್ಸವದಲ್ಲಿ ಮಾತ್ರವಾಗಿದೆ.
Kshetra Samachara
30/03/2022 10:03 pm