ಸೂರಿಂಜೆ: ಸುರತ್ಕಲ್ ಸಮೀಪದ ಸೂರಿಂಜೆ ಬೊಳ್ಳಾರು ಕೋರ್ದಬ್ಬು ದೈವಸ್ಥಾನದ ವಾರ್ಷಿಕ ನೇಮೋತ್ಸವ ಪ್ರಯುಕ್ತ ದೈವಸ್ಥಾನದ ವಠಾರದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸೂರಿಂಜೆ ಪೊನ್ನಗಿರಿ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಕೇಶ್ ಶೆಟ್ಟಿ ಬೈಲಗುತ್ತು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ದ ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ,ಮಂಗಳೂರು ಮನಪಾ ನಾಮನಿರ್ದೇಶಿತ ಸದಸ್ಯ ಪ್ರಶಾಂತ್ ಮೂಡಾಯಿಕೊಡಿ,ಚೇಳೈರು ಗ್ರಾ ಪಂ ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಮಧ್ಯ, ಉದ್ಯಮಿ ಚರಣ್ ಜೆ ಶೆಟ್ಟಿ ಅತ್ತೂರು, ಮುಂಬಯಿ ಉದ್ಯಮಿ ಅನಿಲ್ ಶೆಟ್ಟಿ ತೇವು,ಗುತ್ತಿಗೆದಾರ ಭವಾನಿ ಶಂಕರ್ ಕೈಕಂಬ,ಧನಂಜಯ ಶೆಟ್ಟಿ ಬೊಳ್ಳಾರು,ಮನೋಹರ ಶೆಟ್ಟಿ ಬೊಳ್ಳಾರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೂರಿಂಜೆ ಗ್ರಾ.ಪಂ ಅಧ್ಯಕ್ಷ ಜೀತೆಂದ್ರ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ದೇವರ ವಿಗ್ರಹ ಹೊರುವ ಸುರೇಶ್ ಭಟ್ ಬೆಳ್ಮಣ್,ಡಾಕ್ಟರೇಟ್ ಪದವಿ ಪಡೆದ ವಾಮನ ಸಾಲ್ಯಾನ್ ಶಿಬರೂರು, ಕರ್ನಾಟಕ ಸರಕಾರದ ದಕ್ಷಿಣ ಕನ್ನಡ ಜಿಲ್ಲಾ ಕೆ,ಡಿ,ಬಿ ಸದಸ್ಯರಾಗಿ ನಾಮನಿರ್ದೇಶನ ಗೊಂಡ ಬೋಜರಾಜ್ ಶೆಟ್ಟಿ ಸೂರಿಂಜೆ ರವರನ್ನು ಗೌರವಿಸಲಾಯಿತು. ಬಳಿಕ ಕೋರ್ದಬ್ಬು ಯುವ ಸೇವಾ ಸಮಿತಿ ಬೊಳ್ಳಾರು ವತಿಯಿಂದ ಪ್ರತಿಭಾ ಪುರಸ್ಕಾರ ಸಾಂಸ್ಕೃತಿಕ ಕಾರ್ಯ ಕ್ರಮ ನಡೆಯಿತು.
Kshetra Samachara
27/03/2022 03:06 pm