ಮುಲ್ಕಿ: ಹಳೆಯಂಗಡಿ ಪರಿಸರದಲ್ಲಿ ಮಹಿಳಾ ಸಶಕ್ತಿಕರಣಕ್ಕಾಗಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಹಳೆಯಂಗಡಿ ಮಹಿಳಾ ಮಂಡಳಿಗೆ ಮಂಗಳೂರು ತಾಲೂಕು ಮಹಿಳಾ ಮಂಡಲಗಳು ಒಕ್ಕೂಟದ ಸಂಯೋಜನೆಯಲ್ಲಿ ನಡೆದಿರುವ ವಿಶ್ವ ಮಹಿಳಾ ದಿನಾಚರಣೆಯಂದು ಪ್ರತಿವರ್ಷದಂತೆ ಒಂದು ವರ್ಷದ ಕಾರ್ಯಚಟುವಟಿಕೆಗಳ ವಿವರಣೆ, ವರದಿ ಹಾಗೂ ದಾಖಲೆಗಳನ್ನು ಪರಿಗಣಿಸಿ ಹಳೆಯಂಗಡಿ ಮಹಿಳಾ ಮಂಡಳಿಗೆ ಸಾಧಕ ಮಂಡಲ ಪ್ರಶಸ್ತಿಯ” ದ್ವಿತೀಯ ಸ್ಥಾನ ನೀಡಿ ಗೌರವಿಸಿದೆ.
ಮಹಿಳಾ ಮಂಡಳಿಯ ಕ್ರೀಯಾಶೀಲ ಅಧ್ಯಕ್ಷೆ ರೇಷ್ಮಾ ಹಾಗೂ ಸಂಸ್ಥೆಯ ಗೌರವಾನ್ವಿತ ಸದಸ್ಯರು ಉಪಸ್ಥಿತಿಯಲ್ಲಿ ಗಣ್ಯರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.
Kshetra Samachara
25/03/2022 02:04 pm