ಮುಲ್ಕಿ: ಕಂದಾಯ ಇಲಾಖೆ, ಮುಲ್ಕಿ ತಾಲೂಕು, ಪಡುಪಣಂಬೂರು ಗ್ರಾಮ ಪಂಚಾಯತ್ ಸಹಯೋಗದೊಂದಿಗೆ "ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ" ತಹಶಿಲ್ದಾರ್ ಗ್ರಾಮ ವಾಸ್ತವ್ಯ ಕಾರ್ಯಕ್ರಮ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ನೀರಸವಾಗಿ ನಡೆಯಿತು.
ಕಾರ್ಯಕ್ರಮಕ್ಕೆ ಮುಲ್ಕಿ ತಾಲೂಕು ಉಪ ತಹಶೀಲ್ದಾರ್ ಕಮಲಮ್ಮ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿ ಸರಕಾರದ ಗ್ರಾಮದ ಕಟ್ಟಕಡೆಯ ವ್ಯಕ್ತಿಗೆ ಸವಲತ್ತುಗಳನ್ನು ತಲುಪಿಸಲು ಗ್ರಾಮವಾಸ್ತವ್ಯದ ಮೂಲಕ ಯೋಜನೆ ರೂಪಿಸಿದ್ದು ಗ್ರಾಮಸ್ಥರು ಪ್ರಯೋಜನ ಪಡೆಯಬೇಕು ಎಂದರು.
ವೇದಿಕೆಯಲ್ಲಿ ಪಡುಪಣಂಬೂರು ಗ್ರಾಪಂ ಅಧ್ಯಕ್ಷೆ ಮಂಜುಳಾ, ಸದಸ್ಯರಾದ ಮೋಹನ್ದಾಸ್,ಅನಿಲ್ ನಮಿತಾ ,ವಿಜಯಲಕ್ಷ್ಮಿ, ಪ್ರಮೀಳಾ, ಜ್ಯೋತಿ, ಶ್ವೇತಾ, ಉಪತಹಶಿಲ್ದಾರ್ ಬಾಲಚಂದ್ರ, ಪಿಡಿಒ ರಮೇಶ್ ನಾಯ್ಕ, ವಿಎ ಮೋಹನ್, ಕಂದಾಯ ಅಧಿಕಾರಿ ದಿನೇಶ್ ಉಪಸ್ಥಿತರಿದ್ದರು.
ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಬೆರಳೆಣಿಕೆಯಷ್ಟು ಗ್ರಾಮಸ್ಥರು ಭಾಗವಹಿಸಿದ್ದು ಕುರ್ಚಿಗಳು ಖಾಲಿ ಖಾಲಿಯಾಗಿತ್ತು!! ಪಡುಪಣಂಬೂರು ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಗೋಚರಿಸುತ್ತಿದ್ದು ದೇವಸ್ಥಾನಕ್ಕೆ ಬಂದ ಭಕ್ತರನ್ನು ಒತ್ತಾಯಪೂರ್ವಕವಾಗಿ ಸಭೆಯಲ್ಲಿ ಕುಳ್ಳಿರಿಸಲಾಗಿತ್ತು.
ಸಭೆಯ ಬಗ್ಗೆ ಪಡುಪಣಂಬೂರು ಗ್ರಾಪಂ ಗ್ರಾಮಸ್ಥರಿಗೆ ತಿಳಿಸಲು ನಿರ್ಲ್ಯಕ್ಷ ವಹಿಸಿದ್ದು ಸಭೆ ನೀರಸ ವಾಗಲು ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಬೆರಳೆಣಿಕೆಯ ಗ್ರಾಮಸ್ಥರ ಅಹವಾಲು ಸ್ವೀಕರಿಸುವ ಕಾರ್ಯಕ್ರಮ ನಡೆಯಿತು.
Kshetra Samachara
19/03/2022 12:38 pm