ಮುಲ್ಕಿ: ಕಾರ್ನಾಡು ಶ್ರೀ ರಾಮ ಸೇವಾ ಮಂಡಳಿ ಆಶ್ರಯದಲ್ಲಿ ಸಾರ್ವಜನಿಕ ಶನಿಪೂಜೆ ಹಾಗೂ ಕೆರೆಕಾಡು ರಾಮಾಂಜನೇಯ ಮಕ್ಕಳ ಮೇಳದ ಯಕ್ಷಗಾನ ಕಾರ್ಯಕ್ರಮ ಕಾರ್ನಾಡಿನಲ್ಲಿ ನಡೆಯಿತು.
ಪ್ರಾತಃಕಾಲ ವಿಶೇಷ ಪ್ರಾರ್ಥನೆ ಗಣಹೋಮ, ಶನಿಪೂಜೆ , ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾಸ್ಕರ್ ಶೆಟ್ಟಿಗಾರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮುಲ್ಕಿ ನಪಂ ಸದಸ್ಯ ಹರ್ಷರಾಜ ಶೆಟ್ಟಿ, ಮಾತನಾಡಿ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಸಂಘಟನೆಗಳ ಕಾರ್ಯ ಅಭಿನಂದನೀಯ ವಾಗಿದ್ದು ಸಾಧಕರಿಗೆ ಗೌರವ ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ನಿವೃತ್ತ ಉಪನ್ಯಾಸಕ ವೈ. ಎನ್ ಸಾಲ್ಯಾನ್,ರೊ. ಅಶೋಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.ಸಾಧಕರ ನೆಲೆಯಲ್ಲಿ ದಿನೇಶ್ ಮತ್ತು ಕೇಶವ ಮೂಲ್ಯರನ್ನು ಗೌರವಿಸಲಾಯಿತು.
ಶ್ಯಾಮ್ ಸುಂದರ್ ಶೆಟ್ಟಿ ಸ್ವಾಗತಿಸಿದರು. ಸುಧೀರ್ ಕೋಟ್ಯಾನ್ ಧನ್ಯವಾದ ಅರ್ಪಿಸಿದರು.
Kshetra Samachara
14/03/2022 03:15 pm