ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಸಂಪಾಜೆ ಯಕ್ಷೋತ್ಸವ ಶ್ರೀ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ..

ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ನಡೆಯುವ ಸಂಪಾಜೆ ಯಕ್ಷೋತ್ಸವ ಹಾಗೂ ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರಿಪಾದರ ಪುಣ್ಯಸ್ಮೃತಿ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಲುಗುಂಡಿ ಶಾಲಾ ಆವರಣದಲ್ಲಿ ನಡೆಯಿತು.

ಯಕ್ಷೋತ್ಸವ ಉದ್ಘಾಟನೆಯನ್ನು ಎಡನೀರು ಮಠದ ಶ್ರೀ ಸಚ್ಚಿನಂದ ಭಾರತೀ ಮಹಾ ಸ್ವಾಮಿಗಳು ನೇರವೇರಿಸಿ ಅಶೀರ್ವಚನ ನೀಡಿದ್ರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ರಾಜ ಸಂಸ್ಥಾನದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಹಿಸಿದ್ರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ ಎಲ್ ಸಾಮಗ, ನ್ಯಾಯವಾದಿ ಕೆ.ಪಿ‌ಬಾಲಸುಬ್ರಹ್ಮಣ್ಯ, ವೈದಿಕ ವಿದ್ವಾಂಸರಾದ ಹಿರಣ್ಯ ವೆಂಕಟೇಶ್ವರ ಭಟ್, ಶಾಸಕ ಸಂಜೀವ ಮಠಂದೂರು, ಶ್ಯಾಂ ಭಟ್ , ಶ್ರೀಮತಿ ಸುಮನ ಶ್ಯಾಂ ಭಟ್, ರಾಜಾರಾಮ್ ಕೀಲಾರು,

ಉಪಸ್ಥಿತರಿದ್ದರು.

ಶ್ರೀ ಕೆ ಎನ್ ಭಟ್ ಅವರಿಗೆ ಶ್ರೀ ಕೇಶವಾನಂದ ಭಾರತೀ ರಾಷ್ಟ್ರೀಯ ನ್ಯಾಯ ಪ್ರಶಸ್ತಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಸುರೇಂದ್ರ ಕುಮಾರ್ ಗೆ ಶ್ರೀ ಕೇಶವಾನಂದ ಭಾರತೀ ಶೈಕ್ಷಣಿಕ ‌ ಪ್ರಶಸ್ತಿ, ಶ್ರೀ ಶರವು ರಾಘವೇಂದ್ರ ಶಾಸ್ತ್ರಿಯವರಿಗೆ ಯಕ್ಷೋತ್ಸವ ವೈದಿಕ ಪ್ರಶಸ್ತಿ, ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ತಿಚೂರ್ ಬ್ರದಸ್೯ ಚೆನೈ ಇವರಿಗೆ ಶ್ರೀ ಕೇಶವಾನಂದ ಭಾರತೀ ಸಂಗೀತ ಪ್ರಶಸ್ತಿ, ಹಾಗೂ ಪಂಚಾಮೇಳಗಳ ಸಂಚಾಲಕ ಪಿ ಕಿಶನ್ ಹೆಗ್ಡೆ ಅವರಿಗೆ ಶ್ರೀ ಕೇಶವಾನಂದ ಭಾರತೀ ಯಕ್ಷಗಾನಾಧ್ವರ್ಯು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡೂವಿಕೆಯಿಂದ ಚಂದ್ರಾವಳಿ ವಿಲಾಸ,ಮಾಯಮಾರುತೇಯ,ಸಹಸ್ರ ಕವಚ,ಮಕರಾಕ್ಷಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು

Edited By :
Kshetra Samachara

Kshetra Samachara

14/03/2022 01:52 pm

Cinque Terre

1.94 K

Cinque Terre

0

ಸಂಬಂಧಿತ ಸುದ್ದಿ