ಮುಲ್ಕಿ: "ಮಕ್ಕಳು ಸಂಸ್ಕೃತಿ ಮತ್ತು ಸಂಸ್ಕಾರದ ಪಾಠವನ್ನು ಕಲಿಯಬೇಕು ಮತ್ತು ತಂದೆ ತಾಯಿಯನ್ನು ದೇವರಂತೆ ಕಾಣಬೇಕು. ಆಗ ನಮ್ಮ ಬದುಕು ಸಾರ್ಥಕವಾಗುತ್ತದೆ" ಎಂದು ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ) ಅಧ್ಯಕ್ಷ ಶ್ರೀಧರ ಮೊಯಿಲಿ ಹೇಳಿದರು.
ಅವರು ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪಾವಂಜೆ ದೇವಾಡಿಗ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಪಾವಂಜೆ ದೇವಾಡಿಗ ಸಮಾಜ ಸೇವಾ ಸಂಘ (ರಿ) ಅಧ್ಯಕ್ಷ ರಾಮದಾಸ್ ಪಾವಂಜೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಏಕನಾಥೇಶ್ವರೀ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಜಿ.ಎಸ್.ರತ್ನಾಕರ್, ಪಾವಂಜೆ ದೇವಾಡಿಗ ಸಂಘದ ಕಟ್ಟಡ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾರ್ದನ್ ಪಡುಪಣಂಬೂರು, ಯುವ ವೇದಿಕೆಯ ಅಧ್ಯಕ್ಷ ಅಶ್ವಿನ್, ಸೇವಾ ಟ್ರಸ್ಟಿನ ಅಧ್ಯಕ್ಷ ರಮೇಶ್ ದೇವಾಡಿಗ ತೋಕೂರು, ಮಹಿಳಾ ವೇದಿಕೆಯ ಅಧ್ಯಕ್ಷೆ ವಿಮಲ ಕೆ.ದೇವಾಡಿಗ, ಕಾರ್ಯಧ್ಯಕ್ಷ ಯಾದವ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸ್ಯಾಕ್ಸಫೋನ್ ವಾದಕಿ, ಅಕ್ಷತಾ ದೇವಾಡಿಗ ಉಡುಪಿ, ನಾಗಸ್ವರ ವಾದಕ ವಿ.ಕೆ.ಉಮಾನಾಥ ದೇವಾಡಿಗ ಮೂಡಬಿದ್ರಿ, ದೈವಪಾತ್ರಿ ಕೃಷ್ಣ ಪೂಜಾರಿ ಹಳೆಯಂಗಡಿ, ಕುಸ್ತಿಪಟು ಸತೀಶ್ ಬೊಳಾರ್, ಸಸಿಹಿತ್ಲು, ಸಂತೋಷ್ ದೇವಾಡಿಗ ತೋಕೂರು, 2020-21ನೇ ಸಾಲಿನ ಮುಖ್ಯಮಂತ್ರಿ ಪದಕ ವಿಜೇತ ಅಗ್ನಿಶಾಮಕ ವಿಜಯ ದೇವಾಡಿಗ, ಕಡೆತೋಟ ಮುಕ್ಕ, ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಾಬು ದೇವಾಡಿಗ ಪಂಜ, ಕಲೆ ಸಾಹಿತ್ಯ, ಸಾಂಸ್ಕ್ರತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜನಾರ್ದನ್ ಪಡುಪಣಂಬೂರು ರವರನ್ನು ಸನ್ಮಾನಿಸಲಾಯಿತು.
ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯ ಒಟ್ಟು 17 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.
2020-21ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಶೇ.98.56 ಅಂಕಗಳನ್ನು ಪಡೆದ ಕು.ಪೂರ್ವಿ ಎನ್.ದೇವಾಡಿಗ, ಬೆಳ್ಳಾಯರು ಪಿ.ಯು.ಸಿ.ಯಲ್ಲಿ ಶೇ.98.33 ಅಂಕಗಳನ್ನು ಪಡೆದ ಕು.ಪಲ್ಲವಿ ಬೆಳ್ಳಾಯರು ಪ್ರತಿಭಾ ಪುರಸ್ಕಾರ ಹಾಗೂ ಬಿ.ಸಿ.ಎ. ಪದವಿ ಪರೀಕ್ಷೆಯಲ್ಲಿ ಶೇ.87.5 ಅಂಕಗಳನ್ನು ಪಡೆದ ಕು.ಮನಿಷಾ ಜೆ.ದೇವಾಡಿಗ ರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರಾಗಿ ಆಯ್ಕೆಯಾದ ರಘು ಕೆ.ದೇವಾಡಿಗ ರವರನ್ನು ಗೌರವಿಸಲಾಯಿತು.ತೋಕೂರು ರತಿ ದೇವಾಡಿಗ ರವರಿಗೆ ವೈದ್ಯಕೀಯ ನೆಲೆಯಲ್ಲಿ ರೂ.10,000/- ದ ಚೆಕ್ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
Kshetra Samachara
14/03/2022 01:34 pm