ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮೂಡಬಿದ್ರೆ ಜೈನ ಮಠದ ಸ್ವಾಮೀಜಿ ಮುಲ್ಕಿ ಸೀಮೆಯ ಅರಮನೆ ಭೇಟಿ

ಮುಲ್ಕಿ:ಮೂಡಬಿದಿರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಪಡು ಪಣಂಬೂರಿನ ಮುಲ್ಕಿ ಸೀಮೆ ಅರಮನೆ ಹಾಗೂ ಅರಸು ಡೈರಿ ಫಾರ್ಮ್ಸ್ ಗೆ ಭೇಟಿ ನೀಡಿ ಸೀಮೆಯ ಅರಸರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿವಿಧ ರೀತಿಯ ಗೋತಳಿಗಳನ್ನು ಪಾಲನೆ ಮಾಡಿಕೊಂಡು ಸಾಮಾಜಿಕ ಕಾರ್ಯಗಳ ಜೊತೆಗೆ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭ ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಸ್ವಾಮೀಜಿಯವರನ್ನು ಸೀಮೆಯ ವತಿಯಿಂದ ಗೌರವಿಸಿದರು

ಮುಲ್ಕಿ ಅರಮನೆಯ ಗೌತಮ್ ಜೈನ್, ದಿನೇಶ್ ಸುವರ್ಣ ಬೆಳ್ಳಾಯರು ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

13/03/2022 10:58 pm

Cinque Terre

396

Cinque Terre

0

ಸಂಬಂಧಿತ ಸುದ್ದಿ