ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೋಕೂರು: "ತಾಂಬೂಲ ಪ್ರಶ್ನಾ ಚಿಂತನೆ"

ಮುಲ್ಕಿ:ಮುಲ್ಕಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಮಗ್ರ ಜೀರ್ಣೋದ್ಧಾರ ಪೂರ್ವಭಾವಿಯಾಗಿ ಪಯ್ಯನ್ನೂರು ಮಾಧವನ್ ಪೊದುವಾಳ್ ರಿಂದ "ತಾಂಬೂಲ ಪ್ರಶ್ನಾ ಚಿಂತನೆ" ನಡೆಯಿತು.

ಆರಂಭದಲ್ಲಿ ದೇವಳದ ತಂತ್ರಿವರ್ಯರಾದ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಪ್ರಾರ್ಥನೆ ನಡೆದು ಪ್ರಶ್ನಾ ಚಿಂತನೆಯಲ್ಲಿ ದೇವಳದ ಜೀರ್ಣೋದ್ಧಾರ ಕೆಲಸ ಕಾರ್ಯಗಳ ಬಗ್ಗೆ ದೇವರ ಅನುಗ್ರಹವನ್ನು ಪಡೆಯಲಾಯಿತು

ಹಾಗೂ ಎ. 6ರಂದು ಶ್ರೀ ದೇವರ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ ವಿಧಿಗಳನ್ನು ನಡೆಸುವುದಾಗಿ ನಿರ್ಣಯಿಸಲಾಯಿತು.

ಈ ಸಂದರ್ಭದಲ್ಲಿ ವಾಸ್ತುಶಿಲ್ಪ ಶಾಸ್ತ್ರಜ್ಞರಾದ ಕುಡುಪು ಕೃಷ್ಣರಾಜ ತಂತ್ರಿ, ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಭುವನಾಭಿರಾಮ ಉಡುಪ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರಿದಾಸ್ ಭಟ್ ಮತ್ತು ಸರ್ವ ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

13/03/2022 03:33 pm

Cinque Terre

804

Cinque Terre

0

ಸಂಬಂಧಿತ ಸುದ್ದಿ