ಮುಲ್ಕಿ: ಮುಲ್ಕಿ ಬಂಟರ ಸಂಘದ ವ್ಯಾಪ್ತಿಗೆ ಬರುವ 33 ಗ್ರಾಮಗಳಲ್ಲಿರುವ ಬಂಟ ಬಾಂಧವರನ್ನು ಒಗ್ಗೂಡಿಸಿ ಸುದೃಢ ಸಂಘಟನೆಯನ್ನು ಕಟ್ಟುವ ನಿಟ್ಟಿನಲ್ಲಿ ಕಾರ್ನಾಡು, ಬಪ್ಪನಾಡು ಹಾಗೂ ಚಿತ್ರಾಪು ಗ್ರಾಮಗಳ ಗ್ರಾಮಸಭೆಯು ಕಾರ್ನಾಡು ಹರಿಹರ ಕ್ಷೇತ್ರದ ವಿಷ್ಣುಮೂರ್ತಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು
ಜಾಗತಿಗೆ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಭೆಯಲ್ಲಿ ಕೃಷಿ ಸಾಧಕರ ನೆಲೆಯಲ್ಲಿ ಬಪ್ಪನಾಡು ಗ್ರಾಮದ ಪಾಂಡುರಂಗ ಶೆಟ್ಟಿ, ಕಾರ್ನಾಡು ಗ್ರಾಮದ ಸುಧಾಕರ್ ಶೆಟ್ಟಿ ಹಾಗೂ ಚಿತ್ರಾಮ ಗ್ರಾಮದ ಶಂಕರ್ ಶೆಟ್ಟಿ ರವರನ್ನು ಗೌರವಿಸಲಾಯಿತು. ಗ್ರಾಮಸ್ಥರ ಮನವಿಗಳನ್ನು ಸ್ವೀಕರಿಸಲಾಯಿತು, ಆರೋಗ್ಯ ವಿಮೆಯ ಬಗ್ಗೆ ಉತ್ತಮ ಮಾಹಿತಿ ನೀಡಲಾಯಿತು. ಸಂಘದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿಯವರು ಸಂಘದ ಕಾರ್ಯಕ್ರಮಗಳ ಬಗ್ಗೆ ವಿವರಿಸಿ ಎಲ್ಲರ ಸಹಕಾರ ಕೋರಿದರು. ಕಾರ್ಯಕಾರಿ ಸಮಿತಿಯ ಸದಸ್ಯ ಜಿವನಕೆ.ಶೆಟ್ಟಿ ಗ್ರಾಮಸಭೆಯಲ್ಲಿ ಸಂಘಟನೆ ಬಗ್ಗೆ ಮಾತನಾಡಿದರು.
ಮುಲ್ಕಿ ಬಂಟರ ಸಂಘದ ಪದಾಧಿಕಾರಿಗಳಾದ ಗಂಗಾಧರ್ ವಿ ಶೆಟ್ಟಿ, ನಾಯಿನಾಥ್ ಶೆಟ್ಟಿ, ದಾಮೋದರ್ ಶೆಟ್ಟಿ, ಮಹಿಳಾ ವಿಭಾಗದ ಚಂದ್ರಕಲಾ ಶೆಟ್ಟಿ, ನಿಶಾಂತ್ ಶೆಟ್ಟಿ, ರವಿರಾಜ್ ಶೆಟ್ಟಿ, ಕಿಶೋರ್ ಶೆಟ್ಟಿ ಬಪ್ಪನಾಡು, ಕೃಷ್ಣ ಶೆಟ್ಟಿ ಕಾರ್ನಾಡು, ಹರ್ಷರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಅಶೋಕ್ ಕುಮಾರ್ ಶೆಟ್ಟಿ ಸ್ವಾಗತಿಸಿದರು, ಮಹೀಮ್ ಹೆಗ್ಡೆ ವಂದಿಸಿದರು.
Kshetra Samachara
07/03/2022 07:48 pm