ಪಕ್ಷಿಕೆರೆ: ಪಂಜ -ಕೊಯಿಕುಡೆ ಶ್ರೀ ಶನೈಶ್ಚರ ಮಂಡಳಿ, (ರಿ )ಯ ವಾರ್ಷಿಕ ಪೂಜಾ ಮಂಗಲೋತ್ಸವ ವಿಜೃಂಭಣೆ ಯಿಂದ ಜರುಗಿತು,
ಮದ್ಯಾಹ್ನ ಭಜನಾ ಕಾರ್ಯಕ್ರಮ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಗಂಟೆ 8.30ಕ್ಕೆ ಸ್ಥಳೀಯ ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಂಡಳಿಯ ಗೌರವಾಧ್ಯಕ್ಷ ವಾಸುದೇವ್ ಭಟ್ ಪಂಜ, ವಿಶ್ವನಾಥ್ ಶೆಟ್ಟಿ, ಪಂಜದಗುತ್ತು, ವಸಂತ ಶೆಟ್ಟಿ, ನಲ್ಯಗುತ್ತು, ಬಾಲಕೃಷ್ಣ ದೇವಾಡಿಗ, ಕೊಯಿಕುಡೆ, ಸುರೇಶ್ ಪಂಜ, ಕೆಮ್ರಾಲ್ ಗ್ರಾ ಪಂಚಾಯತ್ ಉಪಾಧ್ಯಕ್ಷ ಸುರೇಶ್ ಪಂಜ, ರಾಮಚಂದ್ರ ಶೆಟ್ಟಿ, ಮಂಡಳಿಯ ಅಧ್ಯಕ್ಷ ಉಪಸ್ಥಿತರಿದ್ದರು.ಭಾಸ್ಕರ್ ಶೆಟ್ಟಿ, ಕೊಯಿಕುಡೆ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮ ದಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್,ಬಿಜೆಪಿ ನಾಯಕರಾದ ಈಶ್ವರ್ ಕಟೀಲ್, ವಿನೋದ್ ಕುಮಾರ್ ಬೋಳ್ಳೂರು, ಕಸ್ತೂರಿ ಪಂಜ ಹಾಗೂ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಮಂಗಲೋತ್ಸವದಲ್ಲಿ ಪಾಲ್ಗೊಂಡರು.
Kshetra Samachara
07/03/2022 06:01 pm