ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಚ್ಚೂರು: ಜನಸೇವೆ, ಸಂಘಟನೆಗಳ ಕಾರ್ಯ ಶ್ಲಾಘನೀಯ": ಡಾ. ಭರತ್ ಶೆಟ್ಟಿ

ಮುಚ್ಚೂರು:ಮಂಗಳೂರು ನಗರ ಉತ್ತರ ಕ್ಷೇತ್ರದ ಮುಚ್ಚೂರು ಗ್ರಾಮ ಪಂಚಾಯತ್ ನಲ್ಲಿರುವ ವಿಥಿಲಾ ಸಭಾಭವನದಲ್ಲಿ ನೋಂದಾಯಿತ ಕಾರ್ಮಿಕ ರಿಗೆ ಆರೋಗ್ಯ ತಪಾಸಣೆ ಹಾಗೂ ತರಬೇತಿ ಕಾರ್ಯಕ್ರಮ ನಡೆಯಿತು.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಹಯೋಗದಲ್ಲಿ ಗ್ರಾಪಂ ಮುಚ್ಚೂರು, ಪ್ರಗತಿ ಯುವಕ ಮಂಡಲ(ರಿ) ಮುಚ್ಚೂರು, ಶ್ರೀ ರಾಮ ಯುವಕ ಸಂಘ(ರಿ) ಮುಚ್ಚೂರು ಕಾನ,ಶಾಶ್ವತ ಯುವಕ ಸಂಘ(ರಿ)ಮುಚ್ಚೂರು ,ಜೂನಿಯರ್ ಬಾಯ್ಸ್ ನೀರುಡೆ,ಹಾಗೂ ಸಮಾಜ ಕಾರ್ಯ ವಿಭಾಗ ಆಳ್ವಾಸ್ ಮೂಡಬಿದ್ರೆ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಶಾಸಕ ಡಾ.ಭರತ್ ಶೆಟ್ಟಿ ವೈ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಜನ ಸೇವೆ ಜನಾರ್ದನ ಸೇವೆ ಮೂಲಕ ಬಡವರ ಹಿಂದುಳಿದ ವರ್ಗದವರ ಸೇವೆಗೆ ಕಾರ್ಯಕಲ್ಪ ಒದಗಿಸುತ್ತಿರುವ ಸಂಘಟನೆಗಳ ಕಾರ್ಯ ಶ್ಲಾಘನೀಯ ಎಂದರು.

ಇದೇ ಸಂದರ್ಭದಲ್ಲಿ ಶಾಸಕರು ಗ್ರಾ.ಪಂ ಶೇಕಡ 25% ನಿಧಿ ಯಿಂದ ಕುಡಿಯುವ ನೀರಿನ ಸಿಂಟೆಕ್ಸ್ ವಿತರಿಸಿದರು.

ಗ್ರಾ.ಪಂ. ಉಪಾಧ್ಯಕ್ಷ ನಾರಾಯಣ ಎ. ಯಸ್, ಕಾರ್ಮಿಕ ಇಲಾಖೆ ಅಧಿಕಾರಿ, ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ದನ ಗೌಡ, ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

07/03/2022 04:02 pm

Cinque Terre

1.29 K

Cinque Terre

0

ಸಂಬಂಧಿತ ಸುದ್ದಿ