ಮುಲ್ಕಿ: ಮುಲ್ಕಿ ಸಮೀಪದ ಪಡುಪಣಂಬೂರು ಬೆಳ್ಳಾಯರು ಮೂಡು ತೋಟ ಶ್ರೀ ಜಾರಂದಾಯ ದೈವದ ವರ್ಷಾವಧಿ ನೇಮೋತ್ಸವ ಕೊಲ್ನಾಡು ಮೂಡುತೋಟದಲ್ಲಿ ವಿಜೃಂಭಣೆಯಿಂದ ನಡೆಯಿತು.
ಶನಿವಾರ ಸಂಜೆ ನಾಲ್ಕು ಗಂಟೆಗೆ ಮಾಗಂದಡಿ ಮನೆಯಲ್ಲಿ ಬಂಟ ದೈವಕ್ಕೆ ವಡ್ಯಾಣ ಹಾಗೂ ಭಂಡಾರ ಪೆಟ್ಟಿಗೆಯನ್ನು ಒಪ್ಪಿಸಿ ಬಳಿಕ ತೋಕೂರು ಮಾಗಂದಡಿ ಮನೆಯಿಂದ ಭಂಡಾರ ಹೊರಡುವ ಕಾರ್ಯಕ್ರಮ ನಡೆಯಿತು.
ಸಾಯಂಕಾಲ ವರ್ಷಾವಧಿ ಚೌತಿ ಪೂಜೆ, ರಾತ್ರಿ ಭಂಡಾರ ಇಳಿಯುವುದು, ಸಾರ್ವಜನಿಕ ಅನ್ನಸಂತರ್ಪಣೆ ಬಳಿಕ ಗಗ್ಗರ ನೇಮೋತ್ಸವ, ಕೋರ್ದಬ್ಬು ದೈವ ಬೇಟಿ ವಿಜ್ರಂಭಣೆಯಿಂದ ನಡೆಯಿತು.
ಈ ಸಂದರ್ಭ ದೈವಸ್ಥಾನ ಅರ್ಚಕ ಶಶಿಧರ್ ಮೂಡು ತೋಟ, ಸಮಿತಿ ಅಧ್ಯಕ್ಷ ಕುಮಾರ್ ಎನ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅನಿಲ್ ಶಾಮ್ ಶೆಟ್ಟಿ ಮೂಡು ತೋಟ, ಕಿರಣ್ ಶೆಟ್ಟಿ ಕೊಲ್ನಾಡು ಗುತ್ತು, ಭುಜಂಗ ಶೆಟ್ಟಿ ಉತ್ರಂಜೆ, ಪ್ರಕಾಶ್ ಭಟ್, ರಾಮಚಂದ್ರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
06/03/2022 11:44 am