ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ನಾಡ್: ಸಮಾಜಸೇವೆಯಲ್ಲಿ ಸಂಘಟನೆಗಳ ಪಾತ್ರ ಹಿರಿದು: ಅರವಿಂದ ಪೂಂಜಾ

ಮುಲ್ಕಿ: ಕಾರ್ನಾಡು ಶ್ರೀ ಹರಿಹರ ಕ್ಷೇತ್ರ ಯುವಕ ವೃಂದ ಮತ್ತು ಮಹಿಳಾ ಮಂಡಳಿ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ಷೇತ್ರದ ವೇದಿಕೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ನಾಡು ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂಎಚ್ ಅರವಿಂದ ಪೂಜಾ ವಹಿಸಿ ಮಾತನಾಡಿ ಸಮಾಜಸೇವೆಯಲ್ಲಿ ಸಂಘಟನೆಗಳ ಪಾತ್ರ ಹಿರಿದಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ಇನ್ನಷ್ಟು ಕಾರ್ಯಕ್ರಮಗಳು ನಡೆದು ಸಂಘಟನೆಗಳು ರಾಷ್ಟ್ರಕ್ಕೆ ಮಾದರಿಯಾಗಲಿ ಎಂದರು.

ಮಾಣಿಲ ಶ್ರೀಧಾಮ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಮಕ್ಕಳಿಗೆ ಸಂಸ್ಕೃತಿ ಹಾಗೂ ಸಂಸ್ಕಾರ ತಿಳಿಸುವ ಕೆಲಸವಾಗಬೇಕು ಎಂದರು..

ಮುಖ್ಯ ಅತಿಥಿಗಳಾಗಿ ಮುಲ್ಕಿ ನ.ಪಂ. ಸದಸ್ಯ ಹರ್ಷರಾಜ ಶೆಟ್ಟಿ, ಬಿರುವೆರ್ ಕುಡ್ಲ ಮುಲ್ಕಿ ಘಟಕದ ಅಧ್ಯಕ್ಷ ಕಿಶೋರ್ ಸಾಲಿಯಾನ್ ಬಪ್ಪನಾಡು, ನಿವೃತ್ತ ಬ್ಯಾಂಕ್ ಅಧಿಕಾರಿ ಅಶೋಕ್ ಕುಮಾರ್ ಶೆಟ್ಟಿ, ಉದ್ಯಮಿ ಜೀವನ್ ಕೆ. ಶೆಟ್ಟಿ ಕಾರ್ನಾಡು ಕಾರ್ನಾಡು ರಾಮಸೇವಾ ಮಂಡಳಿ ಅಧ್ಯಕ್ಷ ಭಾಸ್ಕರ ಶೆಟ್ಟಿಗಾರ್, ಯುವಕ ವೃಂದದ ಅಧ್ಯಕ್ಷ ಅಶೋಕ್ ಪಡುಬೈಲು, ಮಹಿಳಾ ಮಂಡಳಿ ಅಧ್ಯಕ್ಷೆ ರಾಧಿಕಾ ಯಾದವ ಕೋಟ್ಯಾನ್, ಕಾರ್ಯದರ್ಶಿ ಸುಗಂಧಿ ಸಾಲ್ಯಾನ್,ಕೋಶಾಧಿಕಾರಿ ವಸಂತಿ ವೈ ಸನಿಲ್, ಸುದರ್ಶನ್ ಭಟ್, ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಉತ್ತಮ ಸಮಾಜ ಸೇವೆಗಾಗಿ ಹರೀಶ್ ಸುವರ್ಣ (ಕಾಲಿಯಾ) ರವರನ್ನು ಸನ್ಮಾನಿಸಲಾಯಿತು. ಯುವಕ ವೃಂದದ ಹಿರಿಯ ಸದಸ್ಯರಾದ ಹಿಮಕರ ಸಾಲ್ಯಾನ್, ಗಿರಿಧರ್ ಕೋಟ್ಯಾನ್ ರವರನ್ನು ಗೌರವಿಸಲಾಯಿತು.

ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ದಿನೇಶ್ ಕೊಲ್ನಾಡು ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

03/03/2022 08:46 pm

Cinque Terre

2.65 K

Cinque Terre

0

ಸಂಬಂಧಿತ ಸುದ್ದಿ