ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಮಂತೂರು: ಭಕ್ತಿಭಾವದ ಮೆರಗು ನೀಡಿದ ಮಕ್ಕಳ ಕುಣಿತ ಭಜನೆ

ಮುಲ್ಕಿ: ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆಯ ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದಲ್ಲಿ ನಡೆದ ದೇವರ ಬಲಿ ಉತ್ಸವದಲ್ಲಿ ಮಕ್ಕಳ ಕುಣಿತ ಭಜನೆ ಭಕ್ತಿಭಾವದ ಮೆರುಗು ನೀಡಿತು.

ಜಾರ್ತಾಮಹೋತ್ಸವದ ಸಂದರ್ಭ ದೇವಳದಲ್ಲಿ ಸಂಪ್ರದಾಯಂತೆ ದೇವರ ಬಲಿ ಉತ್ಸವ ನಡೆಯುತ್ತಿದ್ದು, ಚೆಂಡೆ, ವಾದ್ಯ ಗಳೊಂದಿಗೆ ನಡೆಯುತ್ತದೆ, ಒಂದು ಸುತ್ತು ಚೆಂಡೆಯೊಂದಿಗೆ, ಮತ್ತೊಂದು ನಾಗಸ್ವರ ವಾದನದೊಂದಿಗೆ ಹೀಗೆ ಬೇರೆ ರೀತಿಯಲ್ಲಿ ದೇವರ ಉತ್ಸವ ಬಲಿ ನಡೆದರೆ ಈ ಬಾರಿ ಒಂದು ಸುತ್ತು ಮಕ್ಕಳ ಕುಣಿತ ಭಜನೆಯೊಂದಿಗೆ ನಡೆಯಿತು, ಪ್ರಥಮ ಬಾರಿಗೆ ಕುಣಿತ ಭಜನೆ ಸುತ್ತು ನಡೆದಿದ್ದು ಭಕ್ತಿಭಾವದ ಮೆರುಗು ನೀಡಿತು.

ಸಂದರ್ಭದಲ್ಲಿ ಕುಣಿತ ಭಜನೆ ಗೆ ಪ್ರೋತ್ಸಾಹ ನೀಡಿದ ಶಿಕ್ಷಕರು ಹಾಗೂ ಪೋಷಕರನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಶೆಟ್ಟಿ ಗೌರವಿಸಿದರು.

ದೇವಳದ ಆಡಳಿತ ಮಂಡಳಿ ವತಿಯಿಂದ ಈ ಬಾರಿ ಕುಣಿತ ಭಜನೆ ಪ್ರಾರಂಭಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Edited By : PublicNext Desk
Kshetra Samachara

Kshetra Samachara

03/03/2022 06:36 pm

Cinque Terre

2 K

Cinque Terre

0

ಸಂಬಂಧಿತ ಸುದ್ದಿ