ಸುರತ್ಕಲ್: ಮಾರುತಿ ಸ್ಪೋರ್ಟ್ಸ್ ಕ್ಲಬ್ ಮುಕ್ಕ ಮತ್ತು ಮುಕ್ಕ ಪ್ರೊಟೀನ್ಸ್ ಲಿಮಿಟೆಡ್ ಸಹಯೋಗದಲ್ಲಿ ಮುಕ್ಕ ಬೀಚ್ ಸ್ವಚ್ಛತಾ ಅಭಿಯಾನವು ಆದಿತ್ಯವಾರ ಮುಕ್ಕ ಬೀಚ್ ನಲ್ಲಿ ನಡೆಯಿತು.
ಬಳಿಕ ಮಾತಾಡಿದ ಸ್ಥಳೀಯ ಕಾಪೋರೇಟರ್ ಶೋಭಾ ರಾಜೇಶ್ ಅವರು, "ಪ್ರಧಾನಿ ಮೋದಿ ಅವರ ಕನಸಿನಂತೆ ದೇಶದಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿದೆ. ಇಂದು ಮುಕ್ಕ ಬೀಚ್ ನಲ್ಲಿ ಸ್ವಚ್ಛತೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂತಹ ಕಾರ್ಯಕ್ರಮ ನಿತ್ಯ ನಿರಂತರ ಅಲ್ಲಲ್ಲಿ ನಡೆಯುತ್ತಿರಲಿ" ಎಂದು ಶುಭ ಹಾರೈಸಿದರು.
ಸಾಮಾಜಿಕ ಕಾರ್ಯಕರ್ತ ಉದಯ ಸುವರ್ಣ ಮಾತಾಡಿ "ಪರಿಸರವನ್ನು ಸ್ವಚ್ಛಗೊಳಿಸಿ ಪ್ರವಾಸಿಗರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಮಾರುತಿ ಸ್ಪೋರ್ಟ್ಸ್ ಕ್ಲಬ್ ಮತ್ತು ಮುಕ್ಕ ಪ್ರೊಟೀನ್ಸ್ ಮುಕ್ಕ ಬೀಚ್ ಕ್ಲೀನ್ ಅಭಿಯಾನ ನಡೆಸುತ್ತಿದೆ. ಮಾರುತಿ ಸ್ಪೋರ್ಟ್ಸ್ ಕ್ಲಬ್ ಹಿಂದಿನಿಂದಲೂ ಸಮಾಜಪರ ಕಾರ್ಯ ಚಟುವಟಿಕೆ ಹಮ್ಮಿಕೊಳ್ಳುತ್ತಾ ಬಂದಿದ್ದು ಮುಂದಕ್ಕೂ ಇಂತಹ ಸಾಮಾಜಿಕ ಕಳಕಳಿ ನಿರಂತರವಾಗಿರಲಿ" ಎಂದರು.
ಮಂಗಳೂರು ಮಹಾನಗರಪಾಲಿಕೆಯ ಸ್ಥಳೀಯ ಕಾರ್ಪೊರೇಟರ್ ಶೋಭಾ ರಾಜೇಶ್, ಮಾರುತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕಿಶೋರ್ ಭಾಸ್ಕರ ಪುತ್ರನ್, ದುರ್ಗಾ ಫ್ರೆಂಡ್ಸ್ ಮುಕ್ಕ ಅಧ್ಯಕ್ಷ ಗಿರೀಶ್ ಸುವರ್ಣ, ಮಿತ್ರಪಟ್ಣ ಮೊಗವೀರ ಸಭಾ ಅಧ್ಯಕ್ಷ ರವೀಂದ್ರ ಕರ್ಕೇರ, ಶಿವರಾಮ್ ಗುರಿಕಾರ, ನಂದಿನಿ ಕ್ರಿಕೆಟರ್ಸ್ ಅರಂದ್ ಇದರ ಅಧ್ಯಕ್ಷ ಪುರುಷೋತ್ತಮ ದೇವಾಡಿಗ, ಮಿತ್ರಪಟ್ಣ ಯುವಕ ವೃಂದ ಅಧ್ಯಕ್ಷ ಅರುಣ್ ಕುಮಾರ್, ಮಿತ್ರಪಟ್ಣ ಮಹಿಳಾ ಸಭಾದ ಅಧ್ಯಕ್ಷೆ ಕವಿತಾ ಶರತ್, ಶ್ರೀರಾಮ್ ಫ್ರೆಂಡ್ಸ್ ಅಧ್ಯಕ್ಷ ಸುನಿಲ್ ಸಾಲ್ಯಾನ್ ಹಾಗೂ ಮುಕ್ಕ ಪ್ರೊಟೀನ್ಸ್ ಲಿ. ಮುಕ್ಕ ಇದರ ವ್ಯವಸ್ಥಾಪಕ ನಿರ್ದೇಶಕರಾದ ಮೊಹಮ್ಮದ್ ಆರಿಫ್, ಮುಹಮ್ಮದ್ ಆಸೀರ್, ಜಗನ್ನಾಥ ಶೆಟ್ಟಿ ಬಾಳ, ಉದಯ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಜಗನ್ನಾಥ ಕೋಟ್ಯಾನ್ ಸಸಿಹಿತ್ಲು ಅತಿಥಿಗಳನ್ನು ಸ್ವಾಗತಿಸಿ ವಸಂತ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬೃಹತ್ ಬೀಚ್ ಸ್ವಚ್ಛತಾ ಅಭಿಯಾನ ನಡೆಯಿತು.
Kshetra Samachara
27/02/2022 09:19 am