ಮುಲ್ಕಿ: ಮುಲ್ಕಿ ಸಮೀಪದ ಕೊಲ್ನಾಡುವಿನಲ್ಲಿ ಮಾ. 11, 12, 13 ರಂದು ನಡೆಯಲಿರುವ ರಾಜ್ಯಮಟ್ಟದ ಕೃಷಿ ಸಮ್ಮೇಳನ ಕೃಷಿಸಿರಿ 2022ರ ಪೂರ್ವಭಾವಿಯಾಗಿ ಸ್ಥಳೀಯ ವಿವಿಧ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆ ಕೃಷಿ ಸಮ್ಮೇಳನದ ಅಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪಡುಪಣಂಬೂರು ಗ್ರಾಪಂ ಸದಸ್ಯ ವಿನೋದ್ ಸಾಲ್ಯಾನ್ ಮಾತನಾಡಿ ಎಲ್ಲಾ ಸಂಘಟನೆಗಳು ಒಗ್ಗಟ್ಟಾಗಿ ರಾಜ್ಯಮಟ್ಟದ ಕೃಷಿ ಸಮ್ಮೇಳನ ಕೃಷಿ ಸಿರಿಯನ್ನು ಯಶಸ್ವಿಗೊಳಿಸಬೇಕು ಹಾಗೂ ಭಾನುವಾರ ನಡೆಯಲಿರುವ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ವಿನಂತಿಸಿದರು.
ಸ್ವಸಹಾಯ ಗುಂಪಿನ ಸಹಿತ ವಿವಿಧ ಸಂಘಟನೆಗಳ ಅಧ್ಯಕ್ಷರು ವೇದಿಕೆಯಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಪಣಂಬೂರು ಗ್ರಾಪಂ ಉಪಾಧ್ಯಕ್ಷೆ ಕುಸುಮಾ ಚಂದ್ರಶೇಖರ್ ವಹಿಸಿದ್ದರು
ಈ ಸಂದರ್ಭ ಅಧ್ಯಕ್ಷ ವಿಜಯ ಶೆಟ್ಟಿ, ಪದಾಧಿಕಾರಿಗಳಾದ ಹರಿಪ್ರಸಾದ್, ಸಂತೋಷ್ ಕುಮಾರ್ ಶೆಟ್ಟಿ, ಚಂದ್ರಹಾಸ್ ಕುಂದರ್, ಕೃಷ್ಣ ತಾರೆಮಾರ್, ಜಿ ಆರ್ ಪ್ರಸಾದ್, ಡಾ. ಅಣ್ಣಯ್ಯ ಕುಲಾಲ್, ಪ್ರಶಾಂತ್ ಪೈ, ಗಂಗಾಧರ ಶೆಟ್ಟಿ ಬೆರ್ಕೆ ತೋಟ, ಜೀವನ್ ಶೆಟ್ಟಿ ಕಾರ್ನಾಡ್, ಪದ್ಮನಾಭ ಶೆಟ್ಟಿ, ಮಾಜಿ ತಾಪಂ ಸದಸ್ಯೆ ಸಾವಿತ್ರಿ, ಜಗದೀಶ್ ಆಚಾರ್ಯ, ಅನಿತಾ ಸಾಲ್ಯಾನ್, ಸ್ವಸಹಾಯ ಗುಂಪಿನ ಮೇಲ್ವಿಚಾರಕ ಚಂದ್ರಶೇಖರ, ಸುಮಿತ್ರಾ ವಿಜಯ ಶೆಟ್ಟಿ ದಿನೇಶ್ ಕೊಲ್ನಾಡು ಮತ್ತಿತರರು ಮಾತನಾಡಿ ಕೃಷಿ ಸಮ್ಮೇಳನಕ್ಕೆ ಬೆಂಬಲ ಸೂಚಿಸಿದರು.
Kshetra Samachara
26/02/2022 06:40 pm