ಕಟೀಲು :ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆಕಾಲೇಜಿನಲ್ಲಿ ರೆಡ್ ಕ್ರಾಸ್ ವಿಭಾಗ, ಕಟೀಲ್ ಸ್ಫೋರ್ಟ್ಸ್ ಗೇಮ್ಸ್ ಕ್ಲಬ್, ಎಕ್ಕಾರು ಯುವ ಸಂಗಮದ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ೪೦ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.
ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಕೊಡೆತ್ತೂರುಗುತ್ತು ಬಿಪಿನ್ ಚಂದ್ರ ಶೆಟ್ಟಿ, ಕೇಶವ್, ಚರಣ್ ಶೆಟ್ಟಿ, ಕೆಎಂಸಿಯ ಡಾ. ನೇಹಾ ಪ್ರಸಾದ್, ಪ್ರಾಚಾರ‍್ಯ ಡಾ. ಕೃಷ್ಣ, ಸುಷ್ಮಿತಾ ಸಂತೋಷ್, ಶ್ರೀಮತಿ ಆಶಾಕೀರ್ತಿ ಶೆಟ್ಟಿ ಮತ್ತಿತರರಿದ್ದರು.
Kshetra Samachara
25/02/2022 12:24 pm