ಮುಲ್ಕಿ: ಕಾರ್ನಾಡು ಶ್ರೀ ಧರ್ಮ ಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.
ಫೆ.19 ಬೆಳಿಗ್ಗೆ ಮಾಗಂದಡಿ ಭಂಡಾರ ಮನೆಯಲ್ಲಿ ದೈವಗಳಿಗೆ ಶುದ್ಧ ಕಲಶಾಭಿಷೇಕ, ಧರ್ಮ ಸ್ಥಾನದಲ್ಲಿ ಗಣಹೋಮ ಮತ್ತು ನವಕ ಪ್ರಧಾನ ಕಲಶಾಭಿಷೇಕ, ನಾಗದೇವರಿಗೆ ತಂಬಿಲ ಸೇವೆ, ಧರ್ಮ ಸ್ಥಾನದ ಮೂಲ ಸ್ಥಳದಲ್ಲಿ ಪ್ರಸನ್ನ ಪೂಜೆ ನಡೆಯಿತು.
ಫೆ. 21ರಂದು ಪ್ರಾತಃಕಾಲ ವಿಶೇಷ ಪ್ರಾರ್ಥನೆ, ತೋರಣ ಮುಹೂರ್ತ, ಮಾಗಂದಡಿ ಭಂಡಾರ ಮನೆಯಿಂದ ಶ್ರೀ ಧರ್ಮದೈವಗಳ ಭಂಡಾರ ಹೊರಟು ಧ್ವಜಾರೋಹಣ ನಡೆದು ಮಧ್ಯಾಹ್ನ ಮಹಾಅನ್ನ ಸಂತರ್ಪಣೆ,ಸಂಜೆ ಶ್ರೀ ಉಳ್ಳಾಯ ದೈವದ ನೇಮೋತ್ಸವ ರಾತ್ರಿ ಶ್ರೀ ಧೂಮಾವತಿ ದೈವದ ನೇಮೋತ್ಸವ ನಡೆಯಿತು.
ಈ ಸಂದರ್ಭ ನಪಂ ಸದಸ್ಯ ಹರ್ಷ ರಾಜ ಶೆಟ್ಟಿ, ಸಮಿತಿ ಅಧ್ಯಕ್ಷರಾದ ಅರವಿಂದ ಪೂಂಜಾ, ಕಾರ್ಯದರ್ಶಿ ದಿವಾಕರ ಕೋಟ್ಯಾನ್, ಉಪಾಧ್ಯಕ್ಷ ಅರುಣ್ ಶೆಟ್ಟಿ, ಶಶೀಂದ್ರ ಸಾಲ್ಯಾನ್, ಅರ್ಚಕ ಸದಾನಂದ ಪೂಜಾರಿ, ಶ್ರೀ ಧರ್ಮಸ್ಥಾನ ಜೀರ್ಣೋದ್ಧಾರ ಸಮಿತಿ ಕಾರ್ನಾಡು, ಮುಂಬೈ, ಯುವಕ ವೃಂದ, ಮಹಿಳಾ ಮಂಡಳಿ, ಗ್ರಾಮಸ್ಥರು ಉಪಸ್ಥಿತರಿದ್ದರು.
ಫೆ. 22 ಮಂಗಳವಾರ ಶ್ರೀ ಜಾರಂದಾಯ ಮತ್ತು ಪರಿವಾರ ದೈವಗಳ ನೇಮೋತ್ಸವ, ಫೆ. 23 ಅಣ್ಣಪ್ಪ ಪಂಜುರ್ಲಿ ದೈವದ ನೇಮ ನಡೆಯಲಿದ್ದು ಧ್ವಜಾರೋಹಣ ಮತ್ತು ಭಂಡಾರ ನಿರ್ಗಮನ ನಡೆಯಲಿದೆ.
Kshetra Samachara
22/02/2022 11:19 am