ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್ : ಕೃಷಿ ಮಾಹಿತಿ ಶಿಬಿರ

ಸುರತ್ಕಲ್ : ಬದುಕಿನ ಮೂಲ ಸಂಸ್ಕೃತಿಯಾಗಿರುವ ಕೃಷಿ ಮತ್ತು ಮಣ್ಣಿನ ಗುಣವನ್ನು ಮುಂದಿನ ಯುವ ಪೀಳಿಗೆಗೆ ಅರ್ಥವತ್ತಾಗಿ ಪರಿಚಯಿಸುವ ಕಾರ್ಯ ಪ್ರಸ್ತುತ ಕಾಲಘಟ್ಟದಲ್ಲಿ ಅಗತ್ಯವಿದೆ ಎಂದು ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ನುಡಿದರು.

ಅವರು ಸುರತ್ಕಲ್ ಬಂಟರ ಭವನದಲ್ಲಿ ಬಂಟರ ಸಂಘ ಸುರತ್ಕಲ್ ವತಿಯಿಂದ ನಡೆದ ಕೃಷಿ, ತೋಟಗಾರಿಕೆ ಮತ್ತು ಪಶು ಇಲಾಖೆ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ದೊರಕುವ ಸವಲತ್ತುಗಳ ಬಗ್ಗೆ ನಡೆದ ಸಾರ್ವಜನಿಕ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಬೆನ್ನುಲುಬು ಕೃಷಿಕರಾಗಿದ್ದು ಕೇಂದ್ರ ಮತ್ತು ರಾಜ್ಯ ಸರಕಾರ ಕೃಷಿಕರಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಅದರ ಸೌಲಭ್ಯಗಳನ್ನು ಸಾರ್ವಜನಿಕರು ಪಡೆಯಬೇಕು ಎಂದರಲ್ಲದೆ ಬಂಟರ ಸಂಘವು ಈ ನಿಟ್ಟಿನಲ್ಲಿ ಕೃಷಿಗೆ ಅತ್ಯಂತ ಮಹತ್ವ ನೀಡಿದ್ದು ಶ್ಲಾಘನೀಯ ಎಂದರು.

ಸಭೆಯ ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಕ್ಕಾರ್ ಸಿರಿ ಕುರಲ್ ರೈತ ಸಂಸ್ಥೆಯ ಅಧ್ಯಕ್ಷ ಸದಾಶಿವ ಶೆಟ್ಟಿ ಎಕ್ಕಾರು, ಒಡಿಯೂರು ವಿವಿದ್ದೋದ್ದೇಶ ಸಹಕಾರಿ ಸಂಘ ಮಂಗಳೂರು ಇದರ ಅಧ್ಯಕ್ಷ ಎ. ಸುರೇಶ್ ರೈ, ಸಂಪನ್ಮೂಲ ವ್ಯಕ್ತಿಗಳಾಗಿ ಸುರತ್ಕಲ್ ಕೃಷಿ ಇಲಾಖೆ ಅಧಿಕಾರಿ ಅಬ್ದುಲ್ ಬಸೀರ್, ಸುರತ್ಕಲ್ ತೋಟಗಾರಿಕೆ ಇಲಾಖೆ ಅಧಿಕಾರಿ ಯೂಗೇಂದ್ರ, ಕಿನ್ನಿಗೋಳಿ ಪಶು ಇಲಾಖೆ ಅಧಿಕಾರಿ ಡಾ! ವಿಶ್ವರಾಜ್, ಸುರತ್ಕಲ್ ಬಂಟರ ಸಂಘದ ಕೃಷಿ ಸಮಿತಿ ಸಂಚಾಲಕ ಪುಷ್ಪರಾಜ್ ಶೆಟ್ಟಿ ಮಧ್ಯ, ಬಂಟರ ಸಂಘದ ಉಪಾಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಕಾರ್ಯ ದರ್ಶಿ ಪ್ರವೀಣ್ ಶೆಟ್ಟಿ, ಜತೆ ಕಾರ್ಯ ದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು,ಸಂಘಟನಾ ಕಾರ್ಯ ದರ್ಶಿ ದೇವೇಂದ್ರ ಶೆಟ್ಟಿ, ಸಾಂಸ್ಕೃತಿಕ ಕಾರ್ಯ ದರ್ಶಿ ಜಗನ್ನಾಥ ಶೆಟ್ಟಿ ಬಾಳ,ಮಹಿಳಾ ವೇದಿಕೆ ಅಧ್ಯಕ್ಷೆ ಚಿತ್ರಾ ಜೆ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಲೋಕಯ್ಯ ಶೆಟ್ಟಿ ಮುಂಚೂರು ಕಾರ್ಯಕ್ರಮ ನಿರ್ವಹಿಸಿದರು.

Edited By : PublicNext Desk
Kshetra Samachara

Kshetra Samachara

21/02/2022 05:02 pm

Cinque Terre

1.2 K

Cinque Terre

0

ಸಂಬಂಧಿತ ಸುದ್ದಿ