ಮುಲ್ಕಿ: ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ (ಗ್ರಾ), ಆಯುಷ್ ಇಲಾಖೆ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಬಳಕುಂಜೆ, ಪಡುಪಣಂಬೂರು ಗ್ರಾಪಂ ಮಾರ್ಗದರ್ಶನದಲ್ಲಿ ಫೇಮಸ್ ಯೂತ್ ಕ್ಲಬ್ ( ರಿ) ಮತ್ತು ಮಹಿಳಾ ಮಂಡಲದ ಜಂಟಿ ಆಶ್ರಯದಲ್ಲಿ "ಸಾಧಾರಣ ಕಡಿಮೆ-ತೂಕ ಮಕ್ಕಳ ವಿಶೇಷ ಆರೋಗ್ಯ ತಪಾಸಣೆ" ಮತ್ತು ನರೇಗಾ ಯೋಜನೆಯಡಿ "ಸೋಕ್ ಪಿಟ್ ಅಭಿಯಾನ" ಫೇಮಸ್ ಯೂತ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
ಪಡುಪಣಂಬೂರು ಗ್ರಾಪಂ ಅಧ್ಯಕ್ಷೆ ಮಂಜುಳಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳ ಆರೋಗ್ಯ ಹಿತದೃಷ್ಟಿ ಸಹಿತ ಗ್ರಾಮೀಣ ಮಟ್ಟದಲ್ಲಿ ಫೇಮಸ್ ಯೂಥ್ ಕ್ಲಬ್ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಗ್ರಾಮಸ್ಥರು ಪ್ರಯೋಜನಗಳನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ನಾಯ್ಕ, ವೈದ್ಯೆ ಡಾ. ಶೋಭಾರಾಣಿ, ಅಂಗನವಾಡಿ ಮೇಲ್ವಿಚಾರಕಿ ನಾಗರತ್ನ, ಪಂ. ಸದಸ್ಯರಾದ ವಿನೋದ್ ಎಸ್ ಸಾಲ್ಯಾನ್, ಜ್ಯೋತಿ, ಮೋಹನ್ದಾಸ್ ,ಪವಿತ್ರ, ಕಾರ್ಯದರ್ಶಿ ಲೋಕನಾಥ್ ಭಂಡಾರಿ, ಮಹಿಳಾ ಮಂಡಲದ ಅಧ್ಯಕ್ಷೆ ಪ್ರೇಮಲತಾ ಯೋಗೀಶ್, ಫೇಮಸ್ ಯೂತ್ ಕ್ಲಬ್ ನ ಕಾರ್ಯದರ್ಶಿ ಹಿಮಕರ ಕೋಟ್ಯಾನ್ ಮಕ್ಕಳ ಪೋಷಕರು ಅಂಗನವಾಡಿ ಕಾರ್ಯಕರ್ತೆಯರು ಕ್ಲಬ್ ನ ಮಹಿಳಾ ಸದಸ್ಯರು ಉಪಸ್ಥಿತರಿದ್ದರು
Kshetra Samachara
19/02/2022 07:08 pm