ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಬರೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಕ್ಷೇಮಕ್ಕೆ ತುಡರ ಬಲಿ ಸೇವೆ

ಶಿಬರೂರು: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭದ್ರತಾ ಲೋಪದ ನಂತರ ಅವರಿಗೆ ದೀರ್ಘಾಯುಷ್ಯ ನೀಡಲೆಂದು ಅನೇಕ ಕಡೆಗಳಲ್ಲಿ ಹೋಮಹವನ ನಡೆದಿದ್ದು ಇದೀಗ ಸುರತ್ಕಲ್ ಸಮೀಪದ ಪ್ರಸಿದ್ದ ಶಿಬರೂರು ಕೊಡಮಣಿತ್ತಾಯ ದೈವಸ್ಥಾನದಲ್ಲೂ ದೈವಕ್ಕೆ ತುಡರ ಬಲಿ ಸೇವೆಯನ್ನು ನೀಡಲಾಯಿತು.

ಪಂಜಾಬ್ ನಲ್ಲಿ ಪ್ರಧಾನಿಯವರ ಭದ್ರತಾ ಲೋಪಪ್ರಕರಣ ನಡೆಯುತ್ತಿದಂತೆ, ನರೇಂದ್ರ ಮೋದಿಯವರ ಅಭಿಮಾನಿ ಶಿಬರೂರು ನಿವಾಸಿ ತುಕಾರಾಮ ಸಾಲಿಯಾನ್ ಅವರು ಮೋದಿಯವರಿಗೆ ಯಾವುದೇ ತೊಂದರೆ ಯಾಗಬಾರದೆಂದು ಶಿಬರೂರು ಶ್ರೀ ಉಳ್ಳಾಯ ಮತ್ತು ಕೊಡಮಣಿತ್ತಾಯ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿ ತಾನೂ ತುಡರಬಲಿ ಸೇವೆ ನೀಡುವುದಾಗಿ ಹರಕೆ ಹೊತ್ತುಕೊಂಡಿದ್ದರು.

ಆ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ತುಕರಾಮ ಸಾಲಿಯಾನ್ ಅವರು ತುಡರಬಲಿ ಸೇವೆ ಸಲ್ಲಿಸಿದರು.

Edited By : PublicNext Desk
Kshetra Samachara

Kshetra Samachara

15/02/2022 06:38 pm

Cinque Terre

1.33 K

Cinque Terre

0

ಸಂಬಂಧಿತ ಸುದ್ದಿ