ಮುಲ್ಕಿ:ಪಡುಪಣಂಬೂರು ಸಮೀಪದ ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದಲ್ಲಿ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ)ನ ಸದಸ್ಯರು ಹಾಗೂ ಸದಸ್ಯೆಯರಿಂದ ಜಾತ್ರಾ ಮಹೋತ್ಸವ ಹಾಗೂ ಮಾರಿಪೂಜಾ ಮಹೋತ್ಸವದ ಪೂರ್ವಭಾವಿಯಾಗಿ ಸ್ವಚ್ಛತಾ ಕಾರ್ಯ ಹಾಗೂ ಶ್ರಮದಾನ ನಡೆಯಿತು.
ಈ ಸಂದರ್ಭ ಕ್ಷೇತ್ರದ ಗುರಿಕಾರ ರತ್ನಾಕರ ಶೆಟ್ಟಿಗಾರ್ ಯಾನೆ ಕಾಂತಣ್ಣ ಗುರಿಕಾರ್ ಮಾತನಾಡಿ ಶ್ರೀ ದೇವಿಗೆ ಶ್ರಮದಾನದ ಮೂಲಕ ಅರ್ಪಿಸಿ ಕರಸೇವೆಯನ್ನು ಮಾಡುವ ಸಂಘಟನೆಗಳ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರದ ಸಮಿತಿಯ ಸದಸ್ಯರಾದ ಅಪ್ಪು ಗುರಿಕಾರ್, ಲಕ್ಷ್ಮಣ್ ಗುರಿಕಾರ್,ಪಿತಂಬಾರ ಶೆಟ್ಟಿಗಾರ್, ಉಮಾನಾಥ ಶೆಟ್ಟಿಗಾರ್, ವೇಗನಾಥ್ ಶೆಟ್ಟಿಗಾರ್, ಶಂಕರ್ ಶೆಟ್ಟಿಗಾರ್, ಪಡುಪಣಂಬೂರು ಗ್ರಾಪಂ ಸದಸ್ಯ ಹರಿಪ್ರಸಾದ್, ಸಂಸ್ಥೆಯ ಅಧ್ಯಕ್ಷರಾದ ಸಂತೋಷ್ ದೇವಾಡಿಗ, ಮತ್ತಿತರರು ಉಪಸ್ಥಿತರಿದ್ದರು.
Kshetra Samachara
14/02/2022 06:55 pm