ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಸೂರಜ್ ಹೋಟೆಲ್ ಬಳಿ ಮತ್ತು ಎನ್.ಐ.ಟಿ.ಕೆ ಚೇಳೈರು ಕ್ರಾಸ್ ( ಸುಪ್ರಿಮ್ ಹಾಲ್ ಎದುರು ) ಅಪಘಾತದಿಂದ ಅನೇಕ ಪ್ರಾಣ ಹಾನಿ ಸಂಭವಿಸಿದ್ದು ಕೂಡಲೇ ಕಾರ್ಯಪ್ರವೃತ್ತರಾದ ಮುಂಬಯಿ ಉದ್ಯಮಿ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ರವರು ಅಪಘಾತ ತಪ್ಪಿಸಲು ಸುಮಾರು 4 ಲಕ್ಷ ವೆಚ್ಚದಲ್ಲಿ 20 ಬ್ಯಾರಿಕೇಡ್ ಗಳನ್ನು ಉಚಿತವಾಗಿ ನೀಡಿದ್ದು ಹಸ್ತಾಂತರ ಕಾರ್ಯ ಕ್ರಮ ಸುರತ್ಕಲ್ ಸೂರಜ್ ಹೋಟೆಲ್ ಬಳಿ ನಡೆಯಿತು.
ಮುಂಬಯಿ ಉದ್ಯಮಿ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ,ಮಂಗಳೂರು ಸಂಚಾರಿ ವಿಭಾಗದ ಸಹಾಯಕ ಅಯುಕ್ತರಾದ ಎಂ,ಎ,ನಟರಾಜ್,ಟ್ರಾಪಿಕ್ ಠಾಣಾಧಿಕಾರಿ ಶರೀಪ್, ಮಂಗಳೂರು ನಾಗರಿಕ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಬಂಟರ ಸಂಘ ಸುರತ್ಕಲ್ ಅಧ್ಯಕ್ಷ ಸುಧಾಕರ ಪೂಂಜ,ಸತ್ಯಜಿತ್ ಸುರತ್ಕಲ್, ಸುಭಾಷಿತ ನಗರ ಅಸೋಸಿಯೇಷನ್ ಉಪಾಧ್ಯಕ್ಷ ತಾರನಾಥ ಸಾಲ್ಯಾನ್,ಸಂಘಟನಾ ಕಾರ್ಯ ದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು,ಚೇಳೈರು ಗ್ರಾ ಪಂ.ಮಾಜೀ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು.
Kshetra Samachara
11/02/2022 04:22 pm