ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್:ಕೃಷ್ಣಾಪುರ ಯುವಕ ಮಂಡಲದಿಂದ ರುದ್ರಭೂಮಿಗೆ ಬೂದಿ ಟ್ರೆ

ಸುರತ್ಕಲ್ : ಕೃಷ್ಣಾಪುರ ಕಾಟಿಪಳ್ಳ ಯುವಕ ಮಂಡಲ (ರಿ) ವತಿಯಿಂದ ಕೃಷ್ಣಾಪುರ 8ಎ ಬ್ಲಾಕಿನ ರುದ್ರಭೂಮಿಗೆ ಅತೀ ಅವಶ್ಯಕತೆಯುಳ್ಳ ಎರಡು ಬೂದಿ ಟ್ರೆಯನ್ನು ಆದಿತ್ಯವಾರ ರುದ್ರಭೂಮಿ ನಿರ್ವಹಣಾ ಸಮಿತಿಗೆ ನೀಡಲಾಯಿತು.

ಯುವಕ ಮಂಡಲದ ಗೌರವಾಧ್ಯಕ್ಷ ಪ್ರಶಾಂತ್ ಮುಡಾಯಿಕೋಡಿ ಮಾತನಾಡಿ ಭದ್ರವಾದ ಎರಡು ಬೂದಿ ಟ್ರೆಯನ್ನು ಈಗ ನೀಡಲಾದರೂ ಕಾಲಕ್ರಮೇಣ ವರ್ಷಗಳು ಉರುಳಿ ಅದರ ಕಾರ್ಯಕ್ಷಮತೆ ಅಜೀರ್ಣಾವಸ್ಥೆಗೆ ತಲುಪಿದಲ್ಲಿ ನಮ್ಮ ಯುವಕ ಮಂಡಲದ ವತಿಯಿಂದಲೇ ಟ್ರೇಗಳನ್ನು ಶಾಶ್ವತವಾಗಿ ಒದಗಿಸಲಾಗುವುದು ಎಂಬ ಬದ್ಧತೆಯನ್ನು ಘೋಷಿಸಿದರು.

ಯುವಕ ಮಂಡಲದ ಅಧ್ಯಕ್ಷ ಶಿವಪ್ರಸಾದ್ ಬೊಳ್ಳಾಜೆ, ನಿಕಟ ಪೂರ್ವ ಗೌರವಾಧ್ಯಕ್ಷ ಪಿ ಸುಧಾಕರ್ ಕಾಮತ್, ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್, ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ರಾಕೇಶ್ ಕೋಟ್ಯಾನ್, ಕ್ರೀಡಾ ಕಾರ್ಯದರ್ಶಿ ರಿತೇಶ್ ದೇವಾಡಿಗ, ಚರಣ್ ದೇವಾಡಿಗ, ಶೇಖರ್ ದೇವಾಡಿಗ ರವರು ಹಿಂದೂ ರುದ್ರ ಭೂಮಿ ನಿರ್ವಹಣಾ ಸಮಿತಿಯ ಅಧ್ಯಕ್ಷ ಸದಾನಂದ ಸನಿಲ್, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ರವರಿಗೆ ಬೂದಿ ಟ್ರೆಯನ್ನು ಹಸ್ತಾಂತರಿಸಿದರು.

ಕೃಷ್ಣಾಪುರ ಶ್ರೀ ವಿಶ್ವನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲಕ್ಷ್ಮೀಶ್ ದೇವಾಡಿಗ, ಸದಸ್ಯರಾದ ದುರ್ಗಾಪ್ರಸಾದ್ ಹೊಳ್ಳ, ಪ್ರೇಮ್ ಕುಮಾರ್, ಯಕ್ಷಗಾನ ಬಯಲಾಟ ಸಮಿತಿಯ ಕೋಶಾಧಿಕಾರಿ ಗಿರೀಶ್, ರವಿಚಂದ್ರ, ರುದ್ರಭೂಮಿ ನಿರ್ವಾಹಕ ಆನಂದ ಆಮೀನ್ ಮೊದಲಾದವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

06/02/2022 10:44 pm

Cinque Terre

388

Cinque Terre

0

ಸಂಬಂಧಿತ ಸುದ್ದಿ