ಮುಲ್ಕಿ: ಫೇಮಸ್ ಯೂತ್ ಕ್ಲಬ್ (ರಿ)ಮತ್ತು ಮಹಿಳಾ ಮಂಡಲ ಯಕ್ಷ ದೇಗುಲ ಹತ್ತು ಸಮಸ್ತರು 10ನೇ ತೋಕೂರು ವಿಶ್ವಬ್ಯಾಂಕ್ ಕುಡಿಯುವ ನೀರು ಮತ್ತು ಪರಿಸರ ನೈರ್ಮಲ್ಯ ಸಮಿತಿ ಕ್ಲಸ್ಟರ್ 2 ಜಂಟಿ ಆಶ್ರಯದಲ್ಲಿ ಪರಿಸರ ಸ್ವಚ್ಛತೆ ಮತ್ತು ಶ್ರಮದಾನ ಕಾರ್ಯಕ್ರಮವನ್ನು ಲೈಟ್ ಹೌಸ್ ಜಂಕ್ಷನ್ ನಿಂದ ಶ್ರೀ ಸುಬ್ರಮಣ್ಯ ದೇವಸ್ಥಾನದ ವರೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಪಡುಪಣಂಬೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ರಮೇಶ್ ನಾಯಕ್ ರವರು ಮಾತನಾಡಿ ಸ್ವಚ್ಛತೆ,ನೈರ್ಮಲ್ಯ ವೆಂಬುದು ಪ್ರತಿ ಮನೆ ಮನೆಗಳಿಂದ ಬಂದಾಗ ಮಾತ್ರ ಸ್ವಚ್ಛ ಗ್ರಾಮದ ಪರಿಕಲ್ಪನೆ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಪಡುಪಣಂಬೂರು ಗ್ರಾ ಪಂ ಅಧ್ಯಕ್ಷೆ ಮಂಜುಳಾ, ಪಂಚಾಯತ್ ಕಾರ್ಯದರ್ಶಿ ಲೋಕನಾಥ ಭಂಡಾರಿ, ಪಂಚಾಯತ್ ಸದಸ್ಯರು, ಫೇಮಸ್ ಯೂತ್ ಕ್ಲಬ್ ಅಧ್ಯಕ್ಷ ಭಾಸ್ಕರ್ ಅಮೀನ್, ಮಹಿಳಾ ಅಧ್ಯಕ್ಷೆ ಪ್ರೇಮಲತಾ ಯೋಗೀಶ್ ಉಪಸ್ಥಿತರಿದ್ದರು.
Kshetra Samachara
06/02/2022 04:11 pm