ಮುಲ್ಕಿ: ಮಹಿಳೆಯರಿಗೆ ವಿವಿಧ ಉದ್ಯೋಗ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿದ್ದು ತಮ್ಮನ್ನುತಾವು ಸಬಲೀಕರಣ ಮಾಡಿಕೊಂದು ಅರ್ಥಿಕ ಸ್ವಾತಂತ್ರ್ಯದಿಂದ ಸಮಾಜದಲ್ಲಿ ಸ್ಥಾನಮಾನ ಗಿಟ್ಟಿಸಿಕೊಳ್ಳಬೇಕು ಎಂದು ಕೆನರಾ ಬ್ಯಾಂಕ್ ಕಿನ್ನಿಗೋಳಿ ಶಾಖೆಯ ಮುಖ್ಯ ಪ್ರಬಂಧಕಿ ಶಾಜಿಲ ಎನ್. ಹೇಳಿದರು.
ಐಕಳ ಪೊಂಪೈ ಪದವಿ ಕಾಲೇಜಿನಲ್ಲಿ ಜರಗಿದ ಕಾಲೇಜಿನ ಮಹಿಳಾ ಘಟಕ ಮತ್ತು ಲೈಂಗಿಕ ಕಿರುಕುಳ ತಡೆ ಸಮಿತಿಯ 2021-22 ನೇ ಸಾಲಿನ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಿ ಅಂತಿಮ ಪದವಿ ವಿದ್ಯಾರ್ಥಿನಿಯರಿಗೆ ಮಹಿಳೆಮತ್ತುಉದ್ಯೋಗ ಅವಕಾಶಗಳು ಬಗ್ಗೆ ಜರಗಿದ ಅರಿವು ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಡಾ. ಪುರುಷೋತ್ತಮ ಕೆ. ವಿ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಎಂ.ಕಾಂ ವಿಭಾಗದ ವಂ.ಸುನಿಲ್ ಜಾರ್ಜ್ ಡಿಸೋಜ, ಸಮಿತಿಯ ಸಂಯೋಜಕಿ ಕು| ರಜನಿ ಜೆನಿಟಾ, ಸಹ ಸಂಯೋಜಕಿಯರಾದ ಅಶಿತಾ ಜೆ, ಜ್ಯೋತಿ, ಪದಾಧಿಕಾರಿಗಳಾದ ಸ್ನೇಹ, ಲೋಲಿಟಾ, ಉಪನ್ಯಾಸಕರಾದ ಪ್ಲೋರಿನ್, ಅಶ್ವಿನಿ, ಬ್ಯಾಂಕಿನ ಶಾಖಾಧಿಕಾರಿ ಜಯಶ್ರೀ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಮೆಲಿಶಾ ಸ್ವಾಗತಿಸಿದರು. ಹರ್ಷಿತಾ ವಂದಿಸಿದರು, ನಿಶಾ ಲೋಬೋ ನಿರೂಪಿಸಿದರು.
Kshetra Samachara
02/02/2022 02:22 pm