ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ:ಬಸ್ಸು ಚಾಲಕ-ನಿರ್ವಾಹಕರು ಊರಿನ ರಾಯಭಾರಿಗಳು: ಉಮಾನಾಥ ಕೋಟ್ಯಾನ್

ಮುಲ್ಕಿ:ಬಸ್ಸಿನ ಅವಶ್ಯಕತೆ ಗೊತ್ತಾಗುವುದು ಬಸ್ಸು ಇಲ್ಲದ ದಿನಗಳಲ್ಲಿ ಮಾತ್ರ,ಬಸ್ಸು ಚಾಲಕ-ನಿರ್ವಾಹಕರು ಊರಿನ ರಾಯಭಾರಿಗಳು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು

ಅವರು ಕಿನ್ನಿಗೋಳಿ ಬಸ್ಸು ಚಾಲಕ ನಿರ್ವಾಹಕರ ಸಂಘದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ ಬೇರೆ ಉದ್ಯಮದಂತೆ ಬಸ್ಸು ಉದ್ಯಮವೂ ನಷ್ಟದಲ್ಲಿದ್ದು, ಬಸ್ಸು ಚಾಲಕ ನಿರ್ವಾಹಕರು ಸಮಸ್ಯೆಗೊಳಗಾಗಿದ್ದಾರೆ ಈ ಸಂದರ್ಭ ಆಹಾರ ಕಿಟ್ ವಿತರಿಸಿ ಕಣ್ಣೀರೊರೆಸುವ ಪ್ರಯತ್ನ‌ಮಾಡಲಾಗಿದೆ ಎಂದರು.

ಈ ಸಂದರ್ಭ ಧಾರ್ಮಿಕ ಪರಿಷ್ಯತ್ ಸದಸ್ಯ ಭುವನಾಭಿರಾಮ ಉಡುಪ, ಬಸ್ಸು ಮಾಲಕ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ, ಚಾಲಕ ನಿರ್ವಾಹಕರ ಸಂಘದ ಗೌರವಾಧ್ಯಕ್ಷ ಬಾಸ್ಕರ್ ಪೂಜಾರಿ, ಸಂಘದ ಅಧ್ಯಕ್ಷ ರಾಮಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಅಬ್ಬು ಕಿನ್ನಿಗೋಳಿ ಮತ್ತಿತರರು ಉಪಸ್ಥಿತರಿದ್ದರು.ಕೋನಿ ವರಧಿವಾಚಿಸಿದರು, ಪ್ರಧಾನ ಕಾರ್ಯದರ್ಶಿ ಹರೀಶ್ ಪಕ್ಷಿಕೆರೆ ಸ್ವಾಗತಿಸಿ, ದನ್ಯವಾದ ಸಮರ್ಪಿಸಿದರು. ರಘನಾಥ ಕಾಮತ್ ಕೆಂಚನಕೆರೆ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

21/01/2022 11:02 pm

Cinque Terre

1.73 K

Cinque Terre

0

ಸಂಬಂಧಿತ ಸುದ್ದಿ