ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:ನಾರಾಯಣಗುರುಗಳ ಬಗ್ಗೆ ಅವಹೇಳನ ನಡೆದಲ್ಲಿ ರಾಜಕೀಯ ರಹಿತವಾಗಿ ಹೋರಾಟ

ಮುಲ್ಕಿ:2022ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕೇರಳ ಸರ್ಕಾರದ ಟ್ಯಾಬ್ಲೋ ವಿವಾದಕ್ಕೆ ಸಂಬಂಧ ಪಟ್ಟಂತೆ ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು ನಾರಾಯಣಗುರುಗಳಿಗೆ ಅವಮಾನವಾಗಿದ್ದಲ್ಲಿ ಮುಲ್ಕಿ ಬಿಲ್ಲವ ಸಮಾಜವು ಇದನ್ನು ಖಂಡಿಸುತ್ತದೆ.

ನಾರಾಯಣಗುರುಗಳು ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾದವರಲ್ಲ ಅವರು ವಿಶ್ವ ಮಾನವರಾಗಿದ್ದು ಅವರ ಅವಹೇಳನ ಸರಿಯಲ್ಲ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಸಮಾಜದ ಕುದ್ರೋಳಿಯಲ್ಲಿನ ನಿರ್ಣಯದಂತೆ ಜ. 26ರಂದು ಬಿಲ್ಲವ ಸಂಘದಲ್ಲಿ ಸಮಾಜ ಬಾಂಧವರು ಹಳದಿ ಶಾಲು ಧರಿಸಿ ಭಜನೆ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಲಿದ್ದಾರೆ.

ಮುಂದಿನ ದಿನಗಳಲ್ಲಿ ನಾರಾಯಣಗುರುಗಳ ಬಗ್ಗೆ ಅವಹೇಳನ ನಡೆದಲ್ಲಿ ರಾಜಕೀಯ ರಹಿತವಾಗಿ ಹೋರಾಟ ಮಾಡಲು ನಿರ್ಧರಿಸಲಾಯಿತು ಎಂದು ಸಂಘದ ಅಧ್ಯಕ್ಷ ರಮೇಶ ಅಮೀನ್ ಕೊಕ್ಕರ ಕಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

21/01/2022 10:33 pm

Cinque Terre

1.99 K

Cinque Terre

0

ಸಂಬಂಧಿತ ಸುದ್ದಿ