ಮುಲ್ಕಿ: ಮುಲ್ಕಿ ಸಮೀಪದ ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ವಿಷ್ಣುಮೂರ್ತಿ ದೇವರ ವರ್ಷಾವಧಿ ಜಾತ್ರಾ ಮಹೋತ್ಸವ ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ ಹಾಗೂ ಅರ್ಚಕ ಹಯಗ್ರೀವ ಪಡ್ಡಿಲ್ಲಾಯ ನೇತೃತ್ವದಲ್ಲಿ
ಸರಳ ರೀತಿಯಲ್ಲಿ ಸಮಾಪನಗೊಂಡಿತು.
ಮಂಗಳವಾರ ದೇವಸ್ಥಾನದಲ್ಲಿ ಉತ್ಸವ ಬಲಿ, ಮಹಾಪೂಜೆ, ಶ್ರೀ ಭೂತಬಲಿ, ಶಯನೋತ್ಸವ ನಡೆದು ಕವಾಟ ಬಂಧನ ನಡೆಯಿತು.
ಬುಧವಾರ ಬೆಳಿಗ್ಗೆ ಕವಾಟೋದ್ಘಾಟನೆ, ಪ್ರಸಾದ ವಿತರಣೆ ತುಲಾಭಾರ ಸೇವೆ ಮಧ್ಯಾಹ್ನ ಮಹಾಪೂಜೆ,ರಾತ್ರಿ ಯಾತ್ರಾ ಬಲಿ ಓಕುಳಿ, ಕಟ್ಟೆಪೂಜೆ, ಅವಭೃತ ಜಲಕದ ಬಲಿ, ಧ್ವಜಾರೋಹಣ ನಡೆಯಿತು.
ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರ ಎನ್ಎಚ್ ಅರವಿಂದ ಪೂಂಜಾ, ಮೊಕ್ತೇಸರರಾದ ರವಿಕುಮಾರ್ ಶಶೀಂದ್ರ ಎನ್ ಸಾಲ್ಯಾನ್, ಟಿ ರಾಘವೇಂದ್ರ , ಇಂಜಿನಿಯರ್ ಜೀವನ್ ಕೆ ಶೆಟ್ಟಿ, ಎಸ್ ಕೆಪಿಎ ಮುಲ್ಕಿ ವಲಯದ ಅಧ್ಯಕ್ಷ ಶಿವರಾಮ ಕಾರ್ನಾಡ್ ಮತ್ತಿತರರು ಉಪಸ್ಥಿತರಿದ್ದರು
ಗುರುವಾರ ದೇವಸ್ಥಾನದಲ್ಲಿ ಸಂಪ್ರೋಕ್ಷಣೆ ಮಹಾಪೂಜೆ ಮಂತ್ರಾಕ್ಷತೆ ನಡೆಯಲಿದೆ
Kshetra Samachara
19/01/2022 10:12 pm