ಮುಲ್ಕಿ: ಶ್ರದ್ದಾ ಭಕ್ತಿ ಹಾಗೂ ನಂಬಿಕೆ ಯಿಂದ ಭಗವಂತನನ್ನು ಧ್ಯಾನಿಸಿದಲ್ಲಿ ಭಗವಂತನ ಅನುಗ್ರಹ ಸದಾ ದೊರೆಯುತ್ತದೆ ಎಂದು ಅತ್ತೂರು ಕುಂಜಿರಾಯ ದೈವಸ್ಥಾನದ ಸಮಿತಿಯ ಅಧ್ಯಕ್ಷ ಚರಣ್ ಜೆ. ಶೆಟ್ಟಿ ಹೇಳಿದರು.
ಪಕ್ಷಿಕೆರೆ ಸಮೀಪದ ಪಂಜ - ಮೊಗಪಾಡಿ ಶ್ರೀ ನಾಗಬ್ರಹ್ಮಸ್ಥಾನ ದಲ್ಲಿ ಭಾನುವಾರ ಜರಗಿದ ನೂತನ ಭದ್ರತಾ ಕೊಠಡಿಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉದ್ಯಮಿ ಸುಧಾಕರ ಪೂಂಜಾ ಅಧ್ಯಕ್ಷತೆ ವಹಿಸಿದ್ದರು. ಅತ್ತೂರು ಬಲು ಮಹಾಗಣಪತಿ ಮಂದಿರ ಧರ್ಮದರ್ಶಿ ವೇದಮೂರ್ತಿ ವೆಂಕಟರಾಜ ಉಡುಪ ಆಶಿರ್ವಚನ ನೀಡಿದರು.ಪಂಜ ಮಹಾಗಣಪತಿ ಮಂದಿರ ಸುರೇಶ್ ಭಟ್, ಕೆಮ್ರಾಲ್ ಗ್ರಾ ಪಂ ಅಧ್ಯಕ್ಷೆ ಲೀಲಾ ಕೃಷ್ಣಪ್ಪ , ಮೊಗಪಾಡಿ ಮಿತ್ರ ಮಂಡಳಿಯ ಅಧ್ಯಕ್ಷ ಸುರೇಶ್ ಶೆಟ್ಟಿ ಗರೋಡಿ ಮೆನೆ, ಗೌರವಾಧ್ಯಕ್ಷ ವಿಶ್ವನಾಥ ಶೆಟ್ಟಿ ಪಂಜದಗುತ್ತು , ದಯಾನಂದ ಶೆಟ್ಟಿ ಗರೋಡಿಮನೆ , ರಮೇಶ್ ಶೆಟ್ಟಿ ಪಂಜ ಬಾಕಿಮಾರು ಗುತ್ತು , ಸೀತಾರಾಮ ಶೆಟ್ಟಿ ಪಂಜ , ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುದೇಶ್ ಶೆಟ್ಟಿ ಮೊಗಪಾಡಿ , ಗ್ರಾಮ ಉಪಾಧ್ಯಕ್ಷ ಸುರೇಶ್ ದೇವಾಡಿಗ ಪಂಜ , ಕಾರ್ಯಾಧ್ಯಕ್ಷ ಸುಧಾಮ ಶೆಟ್ಟಿ , ಜಗನ್ನಾಥ ಶೆಟ್ಟಿ ಮತ್ತಿತರರು ಉಪಸ್ತಿತರಿದ್ದರು.
ಸುದರ್ಶನ್ ಮೊಗಪಾಡಿ ಸ್ವಾಗತಿಸಿದರು. ಧೀರಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Kshetra Samachara
16/01/2022 09:43 pm