ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ:"ಸಾಮಾಜಿಕ ಕೈಂಕರ್ಯಗಳ ಮೂಲಕ ರಾಷ್ಟ್ರಕ್ಕೆ ಮಾದರಿಯಾಗಿ"

ಮುಲ್ಕಿ: ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಧರ್ಮಕೇಂದ್ರದ ಆಶ್ರಯದಲ್ಲಿ ಕ್ರಿಸ್ಮಸ್ ಬಂಧುತ್ವ ಕಾರ್ಯಕ್ರಮ ಕಿನ್ನಿಗೋಳಿಯ ಇಗರ್ಜಿಯ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಗರ್ಜಿಯ ಧರ್ಮಗುರುಗಳಾದ ವಂ.ಮೊ.ಮ್ಯಾಕ್ಸಿಂ ನೊರೊನ್ನಾ ವಹಿಸಿ ಮಾತನಾಡಿ ಸರ್ವಧರ್ಮದ ಈ ಕಾರ್ಯಕ್ರಮದಲ್ಲಿ ಲೋಕದಲ್ಲಿ ಶಾಂತಿ ನೆಲೆಸಲು ಪ್ರತಿಜ್ಞೆ ಮಾಡುವ ಮುಖಾಂತರ ಸಾಮಾಜಿಕ ಕೈಂಕರ್ಯಗಳ ಮೂಲಕ ರಾಷ್ಟ್ರಕ್ಕೆ ಮಾದರಿಯಾಗಿ ಎಂದರು.

ಮುಖ್ಯ ಅತಿಥಿಗಳಾಗಿ ಕಟೀಲು ಕ್ಷೇತ್ರದ ಆರ್ಚಕ ಲಕ್ಷ್ಮಿನಾರಾಯಣ ಆಸ್ರಣ್ಣ, ಕಿನ್ನಿಗೋಳಿ ಮೊಹಿದ್ದೀನ್ ಜುಮ್ಮಾ ಮಸೀದಿಯ ಖತೀಬರಾದ ಅಬ್ದುಲ್ ಲತೀಫ್ ಸಖಾಫಿ ,ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷೆ ಶೈಲಾ ಸಿಕ್ವೇರಾ,ಜೋಸೆಫ್ ಕ್ವಾಡ್ರಸ್ ,ಡಾ.ರುಡಾಲ್ಪ್ ಜೋಯಲ್ ನೊರೋನ್ನಾ ಜೋಸ್ಸಿ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು .

Edited By : PublicNext Desk
Kshetra Samachara

Kshetra Samachara

01/01/2022 11:17 pm

Cinque Terre

15.01 K

Cinque Terre

0

ಸಂಬಂಧಿತ ಸುದ್ದಿ