ಮುಲ್ಕಿ: ಕಿನ್ನಿಗೋಳಿಯ ಜನನಿ ಮೆಲೋಡೀಸ್ ವತಿಯಿಂದ ಕಿನ್ನಿಗೋಳಿ ಸ್ವಾಗತ್ ಸಭಾಭವನದಲ್ಲಿ ನಡೆದ ಪಂಚಮ ವರ್ಷದ ಕರಾವಳಿ ಸೂಪರ್ ಸಿಂಗಾರ 2021 ಕಾರ್ಯಕ್ರಮವನ್ನುಧರ್ಮದರ್ಶಿ ಹರಿಕೃಷ್ಣ ಪುನರೂರು ಉದ್ಘಾಟಿಸಿ ಮಾತನಾಡಿ ಯುವ ಪ್ರತಿಭೆಗಳಿಗೆ ಸಂಘಟನೆಗಳ ಸಹಾಯಹಸ್ತ ದೊಂದಿಗೆ ಸೂಕ್ತ ವೇದಿಕೆ ಶ್ಲಾಘನೀಯ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ತನು ಎಲೆಕ್ಟ್ರಿಕಲ್ಸ್ ಮಾಲಕರಾದ ಅಜಿತ್ ಕೆರೆಕಾಡು, ಮೋಹಿನಿ ಕಲಾಸಂಪದದ ಮುಖ್ಯಸ್ಥರಾದ ಗಂಗಾಧರ ಡಿ ಶೆಟ್ಟಿಗಾರ್, ಕಿನ್ನಿಗೋಳಿ ಗ್ರಾ ಪಂ ನ ಮಾಜೀ ಅಧ್ಯಕ್ಷ ಚಂದ್ರಶೇಖರ ಗೋಳಿಜೋರ, ಅಂಗನವಾಡಿ ಮುಖ್ಯಶಿಕ್ಷಕಿ ಜೂಲಿಯಾನ, ಬರ್ಬೋಜಾ ಬೆಂಚ್ ಪ್ರೆಸ್ ಚಾಂಪಿಯನ್ ಕುಮಾರಿ ದಿಶಾ ಕುಕ್ಯಾನ್, ತೀರ್ಪುಗಾರರಾದ ಸುರೇಶ್, ರಾಕೇಶ್ ಮತ್ತಿತರರು ಉಪಸ್ಥಿತರಿದ್ದರು
ಜನನಿ ಮೆಲೋಡೀಸ್ ಅಧ್ಯಕ್ಷರಾದ ಪ್ರಕಾಶ್ ಕಿನ್ನಿಗೋಳಿ ಸ್ವಾಗತಿಸಿದರು.ರಾಜೇಂದ್ರ ಎಕ್ಕಾರು ನಿರೂಪಿಸಿದರು.
Kshetra Samachara
28/12/2021 07:22 am