ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿಲ್ಪಾಡಿ: ವಿವಿಧ ಯೋಜನೆಗಳ "ಒಂದು ದಿನದ ಮುಖಾ- ಮುಖಿ ತರಬೇತಿ"ಕಾರ್ಯಕ್ರಮ

ಮುಲ್ಕಿ:ದ.ಕ.ಜಿಲ್ಲಾ ಪಂಚಾಯತ್,ಮಂಗಳೂರು ತಾಲೂಕು,ಕಿಲ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ಗ್ರಾಮೀಣ ಬಡತನ ನಿವಾರಣಾ ಯೋಜನೆ ,ಮಿಷನ್ ಅಂತ್ಯೋದಯ ಮತ್ತು ಜನರ ಯೋಜನೆ ಜನರ ಅಭಿವೃದ್ಧಿ ಕುರಿತು "ಒಂದು ದಿನದ ಮುಖಾ- ಮುಖಿ ತರಬೇತಿ" ಕಾರ್ಯಕ್ರಮ ನಡೆಯಿತು.

ತರಬೇತುದಾರ ಚಂದ್ರಶೇಖರ್ ರವರು ಪಂಚಾಯತ್ ಮತ್ತು ಇಲಾಖೆಗಳ ಅಭಿವೃದ್ಧಿ ಕೆಲಸದಲ್ಲಿ ಜನ‌ ಪಾಲ್ಗೊಳ್ಳುವ ಬಗ್ಗೆ ತರಬೇತಿ ನೀಡಿದರು.‌

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ಲೀಲಾವತಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉಪಾಧ್ಯಕ್ಷರಾದ ಗೋಪಿನಾಥ ಪಡಂಗ, ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಸರಕಾರದ ಮೂಲಭೂತ ಸೌಕರ್ಯಗಳ ಬಗ್ಗೆ ಗ್ರಾಮಸ್ಥರಿಗೆ ತಿಳುವಳಿಕೆ ಮೂಡಿಸಿ ಅಭಿವೃದ್ಧಿಯತ್ತ ದಾಪುಗಾಲು ಹಾಕಲು ಶ್ರಮಿಸಬೇಕು ಎಂದರು.

ಕಿಲ್ಪಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಸದಸ್ಯರಾದ ದಮಯಂತಿ, ಶಾಂತ,ಮುಖ್ಯ ಪುಸ್ತಕ ಬರಹಗಾರರಾದ ಜಯಲಕ್ಷ್ಮೀ, ಮುಖ್ಯ ಸಂಪನ್ಮೂಲ ವ್ಕಕ್ತಿ ನಮಿತ. ಗ್ರಂಥಪಾಲಕಿ ಲೋಲಾಕ್ಷೀ ಮತ್ತು ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಮಹಿಳಾ ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

18/12/2021 12:25 pm

Cinque Terre

1.38 K

Cinque Terre

0

ಸಂಬಂಧಿತ ಸುದ್ದಿ